ಕ್ರೀಡೆ/ಸಿನಿಮಾಕ್ರೈಂವೈರಲ್ ನ್ಯೂಸ್

ದರ್ಶನ್ ಮನೆ ನಾಯಿ ವೈದ್ಯರಿಗೆ ಕಚ್ಚಿದ್ದು ಹೇಗೆ..? ನಟ‌ ದರ್ಶನ್ ವಿರುದ್ಧ ಎಫ್ ಐಆರ್ ದಾಖಲಿಸಿದ್ಯಾರು? ಏನಿದು ಪ್ರಕರಣ?

ನ್ಯೂಸ್‌ ನಾಟೌಟ್‌: ಸ್ಯಾಂಡಲ್ ವುಡ್ ನಟ ಚಾಲೆಂಜಿಗ್ ಸ್ಟಾರ್ ದರ್ಶನ್ ವಿರುದ್ಧ ನಾಯಿ ಕಚ್ಚಿಸಿದ ಆರೋಪ ಹಿನ್ನೆಲೆ ಎಫ್ಐಆರ್‌ ದಾಖಲಾಗಿದೆ.

ವೈದ್ಯ ಅಮಿತಾ ಜಿಂದಾಲ್ ಎಂಬುವರರು ಆರ್ ಆರ್‌ ನಗರ ಠಾಣೆಯಲ್ಲಿ ದೂರು‌ ದಾಖಲಿಸಿದ್ದಾರೆ. ಇದೇ ತಿಂಗಳ 28 ರಂದು ದೂರುದಾರ ಅಮಿತಾ ಖಾಸಗಿ ಆಸ್ಪತ್ರೆಯ ಕಾರ್ಯಕ್ರಮದ ನಿಮಿತ್ತ ದರ್ಶನ್ ಮನೆ ಬಳಿ ತೆರಳಿದ್ದರು. ಇದೇ ವೇಳೆ ತಮ್ಮ ಕಾರನ್ನು ದರ್ಶನ್ ಮನೆ ಬಳಿ ಪಾರ್ಕಿಂಗ್ ಮಾಡಿದ್ದರು ಎನ್ನಲಾಗಿದೆ.

ಕಾರ್ಯಕ್ರಮ ಮುಗಿಸಿ ಕಾರು ತಗೆದುಕೊಳ್ಳಲು ಬಂದಾಗ ದರ್ಶನ್ ಮನೆಯ ಸಾಕು ನಾಯಿ ನೋಡಿಕೊಳ್ಳುತ್ತಿದ್ದ ಮನೆ ಕೆಲಸದವರು ಪಾರ್ಕಿಂಗ್ ವಿಚಾರಕ್ಕೆ ವೈದ್ಯರ ಬಳಿ ಗಲಾಟೆ ಮಾಡಿದ್ದಾರೆ ಎಂದು ದೂರಲಾಗಿದೆ.

ಆ ವೇಳೆ ವೈದ್ಯರಿಗೆ ದರ್ಶನ್ ಸಾಕು ನಾಯಿ‌ ಹೊಟ್ಟೆ ಭಾಗಕ್ಕೆ ‌ಕಚ್ಚಿದೆ ಎನ್ನಲಾಗಿದ್ದು, ಇದಕ್ಕೂ ಮೊದಲು ಕಾರು ತೆಗೆದುಳಕೊಳ್ಳಬೇಕು ನಾಯಿಯನ್ನ ಬೇರೆಡೆ ಕರೆದುಕೊಂಡು ಹೋಗುವಂತೆ ಹೇಳಿದ್ದೆ ಎಂದು ವೈದ್ಯರು ತಿಳಿಸಿದ್ದಾರೆ.

ಇಬ್ಬರ ನಡುವೆ ವಾಗ್ವಾದ ನಡೆಯುತ್ತಿದ್ದಾಗ ಎರಡು ನಾಯಿ ವೈದ್ಯೆಯ ಮೇಲೆ ಜಿಗಿದು ಕಚ್ಚಿರುವ ಆರೋಪ ಕೇಳಿ ಬಂದಿದೆ.ಆ ಹಿನ್ನೆಲೆ ನಾಯಿ ನೋಡಿಕೊಳ್ಳುತ್ತಿದ್ದ ವ್ಯಕ್ತಿ ಹಾಗೂ ಎರಡನೇ ಆರೋಪಿಯಾಗಿ ದರ್ಶನ್ ವಿರುದ್ದ ವೈದ್ಯರು ದೂರು ದಾಖಲಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

Related posts

ಕನ್ನಡದ ಖ್ಯಾತ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ..! ‘ಮಠ’ ಸಿನಿಮಾ ಖ್ಯಾತಿಯ ಡೈರೆಕ್ಟರ್ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ..!

ಅಶ್ಲೀಲ ವಿಡಿಯೋ ತೋರಿಸಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ ಮಹಿಳೆ..! ಕತ್ತು ಹಿಸುಕಿ ಕೊಂದ ಯುವಕ

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯ ಪತಿ ನಿವಾಸದ ಮೇಲೆ ಈಡಿ ದಾಳಿ..! 119 ಅಶ್ಲೀಲ ಚಿತ್ರಗಳನ್ನು 1.2 ದಶಲಕ್ಷ ಡಾಲರ್ ಗೆ ಮಾರಾಟ ಆರೋಪ..!