ಕ್ರೀಡೆ/ಸಿನಿಮಾವೈರಲ್ ನ್ಯೂಸ್

ಮುನಿಸಿಕೊಂಡಿರುವ ನಟ ದರ್ಶನ್ -ಸುದೀಪ್ ಮತ್ತೆ ಒಂದಾಗ್ತಾರಾ..? ನಟಿ ಸುಮಲತಾ 60ನೇ ವರ್ಷದ ಹುಟ್ಟುಹಬ್ಬದಂದು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಕ್ಕೆ ಸಂಸದೆ ಹೇಳಿದ್ದೇನು..?

ನ್ಯೂಸ್ ನಾಟೌಟ್ : 60ನೇ ವರ್ಷದ ಹುಟ್ಟುಹಬ್ಬದ ಹಿನ್ನಲೆ ಅಂಬಿ ಸಮಾಧಿ ಬಳಿ ಆಗಮಿಸಿ ವಿಶೇಷ ಪೂಜೆಯನ್ನ ಸುಮಲತಾ ಸಲ್ಲಿಸಿದ್ದಾರೆ. ಈ ವರ್ಷದ ಹುಟ್ಟುಹಬ್ಬ ಆಚರಣೆಯ ಬಗ್ಗೆ ಮತ್ತು ಸುದೀಪ್- ದರ್ಶನ್ (Darshan) ಸಂಧಾನದ ವಿಚಾರಕ್ಕೆ ಸಂಬಂಧಿಸಿದಂತೆ ನಟಿ ಸುಮಲತಾ ಪ್ರತಿಕ್ರಿಯೆ ನೀಡಿದ್ದಾರೆ.

ಇದು ನಮ್ಮ ವೈಯಕ್ತಿಕ ಬದುಕಿನ ಕಾರ್ಯಕ್ರಮವಾಗಿದೆ. ಫ್ಯಾಮಿಲಿ ಅಂದ ಮೇಲೆ ಎಲ್ಲರೂ ಒಂದೇನೆ. ಅವರು ಬೇರೇ ರೀತಿಯಲ್ಲಿ ಇರೋಲ್ಲ. ನಾವೆಲ್ಲರೂ ಒಂದೇ ಕುಟುಂಬದವರು ಅನ್ನೋ ಹಾಗೆ ಇರುತ್ತಾರೆ. ಈ ಬಗ್ಗೆ ನಾನು ಹೆಚ್ಚು ಮಾತನಾಡೋಕೆ ಇಷ್ಟಪಡಲ್ಲ, ಇದು ತೀರಾ ಪರ್ಸನಲ್‌ ವಿಚಾರ ಎಂದು ಸುಮಲತಾ ಮಾತನಾಡಿದ್ದಾರೆ.

ಸುಮಲತಾ (Sumalatha) ಹುಟ್ಟುಹಬ್ಬದ ಪ್ರಯುಕ್ತ ಗ್ರ್ಯಾಂಡ್ ಬರ್ತ್ ಡೇ ಪಾರ್ಟಿಯನ್ನ ಶನಿವಾರ ರಾತ್ರಿ (ಆಗಸ್ಟ್ 26) ಆಯೋಜಿಸಲಾಗಿತ್ತು. ಈ ವೇಳೆ ಒಂದೇ ವೇದಿಕೆಯಲ್ಲಿ ಸುಮಲತಾ ಬರ್ತ್ ಡೇ ಸೆಲೆಬ್ರೇಶನ್ ನಲ್ಲಿ ಸುದೀಪ್(Sudeep)- ದರ್ಶನ್ ಭಾಗಿಯಾಗಿದ್ದರು.

ಪಾರ್ಟಿ ಫೋಟೋ ವೈರಲ್ ಬೆನ್ನಲ್ಲೇ ಕಿಚ್ಚ-ದಚ್ಚು ರಾಜಿ ಸಂಧಾನ ನಡೆದಿದೆ ಎನ್ನಲಾಗಿತ್ತು. ಸುಮಲತಾ ಅವರೇ ಮಧ್ಯಸ್ಥಿಕೆ ವಹಿಸಿದ್ದಾರೆ ಎಂದು ಹೇಳಲಾಗಿತ್ತು. ಇದು ನಿಜಾನಾ? ಇಬ್ಬರು ಸ್ಟಾರ್ ನಟನ ರಾಜಿ ಸಂಧಾನ ಆಗಿದ್ಯಾ? ಅಸಲಿ ವಿಚಾರವೇನು ಎಂಬುದನ್ನ ಕಾದುನೋಡಬೇಕಿದೆ.

Related posts

ಶ್ರೀರಾಮಸೇನೆ ಕಾರ್ಯಕರ್ತರಿಗೆ ಬಂದೂಕು ತರಬೇತಿ ನೀಡಿದ್ದಕ್ಕಾಗಿ 27 ಮಂದಿ ವಿರುದ್ಧ ಪ್ರಕರಣ ದಾಖಲು..! ತರಬೇತಿ ನಡೆದಿದ್ದ ಜಾಗದ ಖಾಸಗಿ ಭೂ ಮಾಲಿಕನಿಂದ ದೂರು ದಾಖಲು..!

ಉಡುಪಿ: ಚಾಕುವಿನಿಂದ ಇರಿದು ಪತ್ನಿಯ ಕೊಲೆ, ಟೆರೇಸ್‌ ನಿಂದ ಬಿದ್ದಳು ಎಂದು ಕಥೆ..? ರೀಲ್ಸ್ ನಲ್ಲಿ ಬ್ಯೂಸಿಯಾಗಿದ್ದ ಪತ್ನಿ ಜೊತೆ ಜಗಳ..!

ರೇಣುಕಾಸ್ವಾಮಿ ಕಳುಹಿಸಿದ್ದ ಖಾಸಗಿ ಅಂಗದ ಫೋಟೋಗೆ ಸೂಪರ್ ಎಂದು ಕಾಮೆಂಟ್ ಮಾಡಿದ್ದ ಪವಿತ್ರಾ ಗೌಡ..! ವಾದ-ಪ್ರತಿವಾದಗಳ ಮಧ್ಯೆ ಸ್ಪೋಟಕ ಮಾಹಿತಿ ಬಹಿರಂಗ..!