ಕ್ರೈಂರಾಜ್ಯವೈರಲ್ ನ್ಯೂಸ್ಸಿನಿಮಾ

ನಟ ದರ್ಶನ್ ಫೋಟೋಗೆ ಚಪ್ಪಲಿ, ಬೂಟಿನಿಂದ ಹೊಡೆದು ಪ್ರತಿಭಟನೆ..! ಕರವೇ ಕಾರ್ಯಕರ್ತರ ಆಕ್ರೋಶ

241

ನ್ಯೂಸ್ ನಾಟೌಟ್: ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ಆರೋಪದಲ್ಲಿ ಪೊಲೀಸರ ವಶದಲ್ಲಿರುವ ನಟ ದರ್ಶನ್ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದು, ಈ ವೇಳೆ ದರ್ಶನ್ ಭಾವಚಿತ್ರವನ್ನು ರಸ್ತೆಯ ಮಧ್ಯದಲ್ಲಿಟ್ಟು, ಭಾವಚಿತ್ರಕ್ಕೆ ಚಪ್ಪಲಿ ಹಾಗೂ ಬೂಟಿನಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಟ ದರ್ಶನ್ ವಿರುದ್ಧ ಈಗಾಗಲೇ ರಾಜ್ಯದ ಹಲವೆಡೆ ಪ್ರತಿಭಟನೆ ನಡೆಯುತ್ತಿದೆ. ಈತನನ್ನು ಯಾವ ಸೆಲೆಬ್ರಿಟಿ ಎಂದು ಪರಿಗಣಿಸದೇ ಆತನನ್ನು ಗಲ್ಲಿಗೇರಿಸಬೇಕು, ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ. ನಿರಂತರವಾಗಿ ವಿವಿಧ ಸಂಘಟನೆಗಳಿಂದ ನಟ ದರ್ಶನ್ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದ್ದು, ಇನ್ನು ಬೆಳಗಾವಿಯಲ್ಲಿ ಭಾನುವಾರ ಪ್ರತಿಭಟನೆ ಮಾಡಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ದರ್ಶನ್ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.

See also  ಗೃಹಲಕ್ಷ್ಮಿ ಯೋಜನೆಯ ಹಣ ಹಲವರಿಗೆ ಬಾರದೆ ಇರೋದಕ್ಕೆ ಸಚಿವೆ ಹೇಳಿದ್ದೇನು? ಹಣ ಬಿಡುಗಡೆ ತಡವಾಗುತ್ತಿರುವುದೇಕೆ?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget