ಕ್ರೈಂಬೆಂಗಳೂರುವೈರಲ್ ನ್ಯೂಸ್ಸಿನಿಮಾ

ದರ್ಶನ್ ಪ್ರಕರಣ: ಜೈಲೂಟ ನನಗೆ ಇಷ್ಟ ಆಗಿತ್ತು ಎಂದ ನಟ..! ನಾನು ಜೈಲಿನಲ್ಲಿದ್ದಾಗ ಊಟದ ಸಮಸ್ಯೆ ಇರಲಿಲ್ಲ ಎಂದ ಚೇತನ್..!

59
Spread the love

ನ್ಯೂಸ್ ನಾಟೌಟ್: ಸ್ಯಾಂಡಲ್‌ವುಡ್‌ನ ನಾಯಕ ನಟ ಚೇತನ್ ಅಹಿಂಸಾ (Chetan Ahimsa) ನಟನೆಗಿಂತ ವಿವಾದಗಳ ಮೂಲಕವೇ ಪ್ರಚಾರದಲ್ಲಿರುತ್ತಾರೆ. ನಟ ಚೇತನ್ ಜೈಲೂಟದ ಬಗ್ಗೆ ಮಾತನಾಡಿದ್ದಾರೆ. ನನಗೆ ಜೈಲೂಟ ತುಂಬಾ ಇಷ್ಟ ಆಗಿತ್ತು. ನಾನು ಜೈಲಿನಲ್ಲಿದ್ದಾಗ ಆ ರೀತಿ ಏನೂ ತೊಂದರೆ ಆಗಿರಲಿಲ್ಲ. ಹೀಗೆ ಹೇಳಿ ಪರಪ್ಪನ ಅಗ್ರಹಾರ ಜೈಲಿನ ಊಟದ ಕ್ವಾಲಿಟಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆದರೆ, ಇದು ಎಲ್ಲರಿಗೂ ಇಷ್ಟ ಆಗ್ಬೇಕು ಅಂತ ಏನೂ ಇಲ್ಲ. ಊಟದ ವಿಚಾರದಲ್ಲಿ ಆಯಾ ವ್ಯಕ್ತಿಗಳು ಬೆಳಸಿಕೊಂಡ ಅಭ್ಯಾಸಗಳು ಕಾರಣ ಆಗಿರುತ್ತವೆ ಅಂತಲೂ ಹೇಳಿಕೊಂಡಿದ್ದಾರೆ. ಚೇತನ್ ಅಹಿಂಸಾ ವಿವಾದಾತ್ಮಕ ಟ್ವೀಟ್ ಮಾಡಿದ್ದರು. ಆ ಕಾರಣಕ್ಕೆ ಶೇಷಾದ್ರಿಪುರಂ ಪೊಲೀಸರು ಈ ಹಿಂದೆ ಅರೆಸ್ಟ್ ಮಾಡಿದ್ದರು. ಆಗ ಜೈಲಿಗೆ ಹೋಗಿದ್ರು ಅನ್ನುವ ಮಾಹಿತಿಯೂ ಇದೆ. ಇದು ದರ್ಶನ್ ಗೆ ಟಾಂಗ್ ಕೊಟ್ಟದ್ದು ಎಂದು ಚರ್ಚಿಸಲಾಗುತ್ತಿದೆ.

ದರ್ಶನ್ ಸದ್ಯ ಜೈಲಿನಲ್ಲಿ ಊಟದ ತೊಂದರೆ ಆಗುತ್ತಿದೆ ಎಂದು ದೂರುತ್ತಿದ್ದು, ಮನೆಯೂಟಕ್ಕಾಗಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಇದರಿಂದ ಜೈಲೂಟವನ್ನ ಬಿಟ್ಟಿದ್ದರು ಅನ್ನುವ ಸುದ್ದಿಯೂ ಇದೆ. ಆದರೆ, ಜೈಲಿನಲ್ಲಿ ಇದ್ದು ಬಂದ ಚೇತನ್ ಈಗ ಜೈಲೂಟದ ಬಗ್ಗೆ ಬರೆದುಕೊಂಡದ್ದು ಚರ್ಚೆಗೆ ಕಾರಣವಾಗಿದೆ.

Click

https://newsnotout.com/2024/07/dakshina-kannada-chikkamagaluru-and-kodagu-under-red-alert/
https://newsnotout.com/2024/07/wayanad-landslide-kannada-news-2-suspence-and-2-nomore-origin-of-karnataka/
https://newsnotout.com/2024/07/dog-over-food-kannada-news-viral-issue-women-got-jailed/
https://newsnotout.com/2024/07/ksrtc-bmtc-kannada-news-ticket-20-increase-issue/
https://newsnotout.com/2024/07/kerala-cm-pinaray-vijayan-and-karnataka-cm-siddaramaih-help-to-wayanad/
See also  ಪರೀಕ್ಷಾ ಹಾಲ್‌ ಟಿಕೆಟ್‌ ತಿಂದ ಕುರಿ..! ನೊಂದು ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ..!
  Ad Widget   Ad Widget   Ad Widget   Ad Widget