Uncategorized

ಕಡಬ:ಮಹಿಳೆಗೆ ಅವಾಚ್ಯವಾಗಿ ನಿಂದಿಸಿ,ಹಲ್ಲೆ ಆರೋಪ; ಗಾಯಗೊಂಡ ಮಹಿಳೆ ಆಸ್ಪತ್ರೆಗೆ ದಾಖಲು

ನ್ಯೂಸ್‌ ನಾಟೌಟ್‌:ಮಹಿಳೆ ಮೇಲೆ ಹಲ್ಲೆ ನಡೆಸಿರುವ ಘಟನೆ ಬಗ್ಗೆ ಕಡಬದ ಕೊಂಬಾರುವಿನಿಂದ ವರದಿಯಾಗಿದೆ.ಮಾ.10 ರಂದು ಬೆಳಿಗ್ಗೆ ಮಹಿಳೆ ಒಬ್ಬರೇ ಮನೆಯಲ್ಲಿದ್ದ ವೇಳೆ, ನೆರೆಕೆರೆಯ ಸಂಬಂಧಿ ಶಶಿಧರ ಎಂಬಾತ ಮಹಿಳೆಯ ಮನೆಯ ಕೌಂಪೌಂಡನ್ನು ಜೆಸಿಬಿ ಯಂತ್ರದ ಮೂಲಕ ಕೆಡವುತ್ತಿರುವುದನ್ನು ನೋಡಿ ಮಹಿಳೆ ಆಕ್ಷೇಪಿಸಿದ್ದಾರೆ.

ಈ ವೇಳೆ ಶಶಿಧರ ಎಂಬಾತ ಅವಾಚ್ಯವಾಗಿ ಬೈದು, ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿಸಲಾಗಿದೆ.ಈ ವೇಳೆ ಗಾಯಗೊಂಡ ಮಹಿಳೆಯನ್ನು ಚಿಕಿತ್ಸೆಗಾಗಿ ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ‌ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Related posts

ಒಟಿಟಿ, ಅಮೆಜಾನ್ ಪ್ರೈಂನಲ್ಲಿ ಕಾಂತಾರ ಸಿನಿಮಾ ನೋಡುವವರಿಗೆ ನಿರಾಸೆ

ಮನೆಮನೆಗೆ ನುಗ್ಗಿ ಹೊಡಿತೀವಿ: ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಹೇಳಿಕೆ

ಮಾರ್ಚ್ 24 ರಿಂದ ಮುಷ್ಕರಕ್ಕೆ ಸಾರಿಗೆ ನೌಕರರ ಕರೆ,ವೇತನ ಹೆಚ್ಚಳ,ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಧರಣಿ