ಕರಾವಳಿಬೆಂಗಳೂರು

ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಹಲ್ಲೆ ಯತ್ನ ಆರೋಪ; ಉದ್ಯಮಿ ಶ್ರೀನಿವಾಸ್ ನಾಯ್ಡು ವಿರುದ್ಧ ದೂರು ದಾಖಲು

307

ನ್ಯೂಸ್ ನಾಟೌಟ್ : ಮಾಜಿ ಡಾನ್ ದಿ.ಮುತ್ತಪ್ಪ ರೈ ಪುತ್ರ ರಿಕ್ಕಿ ರೈಯವರ ಮೇಲೆ  ಹಲ್ಲೆಗೆ ಯತ್ನಿಸಿದ ಆರೋಪದ ಮೇಲೆ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಉದ್ಯಮಿ ಶ್ರೀನಿವಾಸ್ ನಾಯ್ಡು ವಿರುದ್ದ ದೂರು ದಾಖಲಾಗಿದೆ. ರಿಕ್ಕಿ ರೈ ಕಾರು ಚಾಲಕ ಸೋಮಶೇಖರ್ ಅವರು ದೂರು ನೀಡಿದ್ದಾರೆ.

ಮೇ.26ರಂದು ರಾತ್ರಿ ಊಟಕ್ಕೆಂದು ರಿಕ್ಕಿ ರೈ ಲ್ಯಾವೆಲ್ಲಿ ರಸ್ತೆಯ ಖಾಜಿ ಬಾರ್ ಅಂಡ್ ಕಿಚನ್ ಹೋಟೆಲ್​ಗೆ ಹೋಗಿದ್ದರು. ಈ ವೇಳೆ ಶ್ರೀನಿವಾಸ್​ ನಾಯ್ಡು ಮೂರು ನಾಲ್ಕು ಜನರೊಂದಿಗೆ ಬಂದು, ಏಕಾಏಕಿ ಅಟ್ಯಾಕ್ ಮಾಡಲು ಮುಂದಾಗಿದ್ದಾರೆ. ಈ ವೇಳೆ ರಿಕ್ಕಿ ರೈ ಹಣೆಗೆ ಪೆಟ್ಟು ಬಿದ್ದಿದೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿಲಾಯ್ತು. ಪೊಲೀಸರು ಬಂದಿದ್ದೇ ಶ್ರೀನಿವಾಸ ನಾಯ್ಡು ಅವರ ಜೊತೆ ಇದ್ದವರು ಎಸ್ಕೇಪ್ ಆಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇನ್ನು ಸೋಮಶೇಖರ್ ದೂರಿನನ್ವಯ ಎಫ್ ಐ ಆರ್ ದಾಖಲಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ರಿಕ್ಕಿ ರೈ ಮತ್ತು ಶ್ರೀನಿವಾಸ್ ನಾಯ್ಡು ಇಬ್ಬರೂ ಒಂದು ಕಾಲದಲ್ಲಿ ಆತ್ಮೀಯ ಸ್ನೇಹಿತರಾಗಿದ್ದರು ಎನ್ನಲಾಗಿದೆ. ಮಾಜಿ ಡಾನ್ ಮುತ್ತಪ್ಪ ರೈ ನಿಧನದ ನಂತರ ರೈ ಗ್ರೂಪ್‌ನಿಂದ ಶ್ರೀನಿವಾಸ್ ನಾಯ್ಡು ಹೊರ ಬಂದಿದ್ದರು. ನಾಯ್ಡು ಹೊರ ಬಂದಿದ್ದಕ್ಕೆ ರಿಕ್ಕಿ ರೈ ಅವರಿಗೆ ಅಸಮಾಧಾನವಾಗಿತ್ತು.ಇದೇ ಕಾರಣಕ್ಕೆ ದ್ವೇಷವೂ ಹುಟ್ಟಿಕೊಂಡಿತ್ತು ಎಂಬ ಮಾಹಿತಿಯಿದೆ.

See also  ಮಹೇಶ್ ಶೆಟ್ಟಿ ತಿಮರೋಡಿಯವರ ಮಾತೃಶ್ರೀ ಇನ್ನಿಲ್ಲ, ಸೌಜನ್ಯ ಹೋರಾಟದ ವೇದಿಕೆಯಲ್ಲಿದ್ದಾಗಲೇ ಅಪ್ಪಳಿಸಿದ ನೋವಿನ ಸುದ್ದಿ, ಕಾರ್ಯಕ್ರಮ ಪೂರ್ಣಗೊಳಿಸಿಯೇ ವೇದಿಕೆಯಿಂದ ಕೆಳಕ್ಕಿಳಿದ ಹಿಂದೂ ಹುಲಿ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget