ಕ್ರೈಂಪುತ್ತೂರುಸುಳ್ಯ

ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಸೆರೆ

ನ್ಯೂಸ್ ನಾಟೌಟ್: ಹಲ್ಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಕಳೆದ ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಬರಮೇಲು ನಿವಾಸಿ ವಿನಯ್(29) ಎಂಬಾತನನ್ನು ಧರ್ಮಸ್ಥಳ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಏನಿದು ಘಟನೆ?

2013ರಲ್ಲಿ ಕೊಕ್ಕಡದಲ್ಲಿ ನಡೆದ ಹಲ್ಲೆ ಪ್ರಕರಣವೊಂದರಲ್ಲಿ ವಿನಯ್ ಆರೋಪಿಯಾಗಿದ್ದು, ಆತನ ವಿರುದ್ಧ ಐಪಿಸಿ ಸೆಕ್ಷನ್‌ 147, 148,149, 323, 506, 324 ರಡಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ವಿನಯ್ ಕಳೆದ ನಾಲ್ಕು ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ, ತಲೆಮರೆಸಿಕೊಂಡ ಕಾರಣ ಕೋರ್ಟ್‌ ವಾರೆಂಟ್ ಜಾರಿ ಮಾಡಲಾಗಿತ್ತು. ಆರೋಪಿಯನ್ನು ಗುರುವಾರ ಧರ್ಮಸ್ಥಳ ಠಾಣೆಯ ಎಚ್.ಸಿ. ರಾಜೇಶ್ ಮತ್ತು ಪಿ.ಸಿ. ಮಲ್ಲಿಕಾರ್ಜುನ್ ಪತ್ತೆ ಹಚ್ಚಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಬಂಧಿತ ಆರೋಪಿ ಕಳ್ಳತನ ಮಾಡಿದ ಬಗ್ಗೆ ಪ್ರಮುಖ ಆರೋಪಿಯಾಗಿದ್ದು, ಉಪ್ಪಿನಂಗಡಿ ಠಾಣೆಯಲ್ಲೂ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Related posts

ಅಪೂರ್ವ ವಸ್ತ್ರಗಳ ಮಳಿಗೆ, ಕುಂಕುಂ ಫ್ಯಾಶನ್‌ಗೆ ಬಂದಿದೆ ಹೊಸ ಉಡುಪುಗಳ ಸಂಗ್ರಹ, ಇಂದೇ ಭೇಟಿ ಕೊಡಿ

ನಾಪೋಕ್ಲುವಿನ ಬಟ್ಟೆ ಮಳಿಗೆ ಮಾಲಕ ಆತ್ಮಹತ್ಯೆ

ಸುಳ್ಯ:ಪಿಲಿಕಜೆಯಲ್ಲಿ NMCಯ ಎನ್.ಎಸ್.ಎಸ್. ವಿಶೇಷ ಶಿಬಿರ ಸಮಾರೋಪ ಸಮಾರಂಭ, ಕಠಿಣ ಪರಿಶ್ರಮ, ಪ್ರಾಮಾಣಿಕತೆ ಮತ್ತು ಸಮಯ ಪ್ರಜ್ಞೆಯನ್ನು ಎನ್.ಎಸ್.ಎಸ್‌. ಕಲಿಸುತ್ತದೆ – ಡಾ. ಕೆ.ವಿ. ಚಿದಾನಂದ