ಕರಾವಳಿಸುಳ್ಯ

ಅಜ್ಜಾವರ : ಪಾದಚಾರಿಗೆ ಗುದ್ದಿದ ಬೈಕ್ -ದಂಪತಿಗೆ ಗಂಭೀರ ಗಾಯ

209

ನ್ಯೂಸ್ ನಾಟೌಟ್ : ಬೈಕ್ ಅಪಘಾತ ಸಂಭವಿಸಿ ಇಬ್ಬರಿಗೆ ಗಂಭೀರ ಗಾಯವಾದ ಘಟನೆ ಸುಳ್ಯದ ಅಜ್ಜಾವರ ಗ್ರಾಮದ ಪಡೀಲ್ ಎಂಬಲ್ಲಿ ನಡೆದಿದೆ.ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ದಂಪತಿ ಬೈಕ್ ನಲ್ಲಿ ಸುಳ್ಯದಿಂದ ಮಂಡೆಕೋಲಿಗೆ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಪಡೀಲ್ ಎಂಬಲ್ಲಿ ಪಾದಚಾರಿಗೆ ಗುದ್ದಿದೆ ಎನ್ನಲಾಗಿದೆ.ಗುದ್ದಿರುವ ರಭಸಕ್ಕೆ ಬೈಕ್ ನಲ್ಲಿದ್ದ ಇಬ್ಬರೂ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ.ಪತಿ ಭವಾನಿಶಂಕರ್ ಅವರಿಗೆ ಗಾಯಗಳಾಗಿದ್ದು,ಪತ್ನಿ ಲೀಲಾವತಿ ಅವರ ತಲೆಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.ಗಾಯಾಳುಗಳಿಬ್ಬರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

See also  ಚಾರಣಿಗರೇ ಗಮನಿಸಿ,ಕುಮಾರಪರ್ವತ ಚಾರಣಕ್ಕೆ ಮತ್ತೆ ಅವಕಾಶ,ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದೇನು?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget