ಕ್ರೈಂ

ಚೆಂಬು ಗ್ರಾಮದ ಓಮ್ನಿ ಪಲ್ಟಿ, ಕುತ್ತಿಗೆಗೆ ಸರಳು ತಾಗಿ 1 ವರ್ಷದ ಮಗು ಸಾವು

409

ಸುಳ್ಯ: ಗುತ್ತಿಗಾರು-ಸುಬ್ರಹ್ಮಣ್ಯ ರಸ್ತೆಯಲ್ಲಿ ಚೆಂಬು ಗ್ರಾಮದ ಓಮ್ನಿ ಕಾರೊಂದು ಪಲ್ಟಿಯಾಗಿ ಒಂದು ವರ್ಷದ ಮಗು ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.

ಕೆದಂಬಾಡಿ ಯತೀಶ್ ಎಂಬುವರ ೧ ವರ್ಷದ ಮಗು ಎಂದು ತಿಳಿದು ಬಂದಿದೆ. ಮಗುವಿನ ಕುತ್ತಿಗೆಗೆ ಸರಳು ತಾಗಿದ್ದರಿಂದ ಮಗು ರಕ್ತಸ್ರಾವಗೊಂಡು ಮೃತಪಟ್ಟ ಘಟನೆ ನಡೆದಿದೆ. ಸುಬ್ರಹ್ಮಣ್ಯಕ್ಕೆ ಹೋಗಿ ಹಿಂತಿರುಗುವಾಗ ಈ ಘಟನೆ ನಡೆದಿದೆ. ಮಗುವಿನ ಮೃತದೇಹ ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿದೆ ಎಂದು ತಿಳಿದು ಬಂದಿದೆ.

See also  ಅರಂತೋಡು: ಕ್ಯಾನ್ಸರ್‌ ರೋಗಕ್ಕೆ ತುತ್ತಾದ 8 ವರ್ಷದ ಕಂದಮ್ಮ
  Ad Widget   Ad Widget   Ad Widget   Ad Widget   Ad Widget   Ad Widget