ಕರಾವಳಿಕ್ರೈಂ

ಹೆದ್ದಾರಿ ಗುಂಡಿಗೆ ಅಮಾಯಕ ಬಲಿ, ನೋಡನೋಡುತ್ತಿದ್ದಂತೆ ಬೈಕ್ ಸವಾರನ ಮೇಲೆ ಹರಿದ ಲಾರಿ..!

ನ್ಯೂಸ್ ನಾಟೌಟ್: ನೋಡನೋಡುತ್ತಿದ್ದಂತೆ ಬೈಕ್ ಸವಾರನ ಮೇಲೆ ಲಾರಿಯೊಂದು ಹರಿದಿರುವ ಘಟನೆ ಮಂಗಳೂರಿನ ಸುರತ್ಕಲ್ ಸಮೀಪದ ಬೈಕಂಪ್ಪಾಡಿಯಲ್ಲಿ ನಡೆದಿದೆ.

ಇಲ್ಲಿನ ಪೆಟ್ರೋಲ್ ಪಂಪ್ ಸಮೀಪದ ಹೆದ್ದಾರಿಯಲ್ಲಿ ಬಾಯ್ತೆರೆದು ಕುಳಿತುಕೊಂಡಿದ್ದ ಗುಂಡಿಗೆ ಬೈಕ್ ಬಿದ್ದು ಅನಾಹುತ ಸಂಭವಿಸಿದೆ.
ದುರಂತಕ್ಕೀಡಾದ ರಸ್ತೆಯಲ್ಲಿರುವ ಗುಂಡಿ ಮುಚ್ಚುವಂತೆ ಹಲವು ಸಲ ಹೇಳಿದ್ರೂ ಇಲಾಖೆಯ ನಿರ್ಲಕ್ಷ್ಯ ಮಾಡಿದೆ.

ಇದರಿಂದ ದುರಂತ ಸಂಭವಿಸಿ ಅಮಾಯಕ ವ್ಯಕ್ತಿ ಬಲಿಯಾದಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಚ್‌ಪಿ ಪೆಟ್ರೋಲ್ ಪಂಪ್ ಬಳಿಯ ರಸ್ತೆಯಲ್ಲಿ ಬಾರೀ ಗಾತ್ರದ ಗುಂಡಿ ಇತ್ತು, ಗ್ರಹಚಾರಕ್ಕೆ ಅದೇ ಗುಂಡಿಗೆ ವ್ಯಕ್ತಿಯೋರ್ವರ ಬೈಕ್ ಬಿದ್ದಿದೆ. ಇದರಿಂದ ಅವರು ಬೈಕ್‌ನಿಂದ ಎಸೆಯಲ್ಪಟ್ಟು ರಸ್ತೆಗೆ ಬಿದ್ದಿದ್ದಾರೆ. ಅದೇ ಸಮಯಕ್ಕೆ ಲಾರಿಯ ಚಕ್ರ ಇವರ‌ ಮೇಲೆಯೇ ಹರಿದಿದೆ.

Related posts

ವ್ಯಾನಿಟಿ ಬ್ಯಾಗ್ ನಲ್ಲಿ ಬಟ್ಟೆಯೊಳಗೆ ಕಟ್ಟಿದ್ದ ಚಿನ್ನಾಭರಣ ಕಳವು, 4 ಲಕ್ಷ ಮೌಲ್ಯದ ಚಿನ್ನಾಭರಣದೊಂದಿಗೆ ಖತರ್ನಾಕ್ ಕಳ್ಳರು ಎಸ್ಕೇಪ್

ನಿರಾಶ್ರಿತರ ಡೇರೆಗಳ ಮೇಲೆ ಇಸ್ರೇಲ್ ನಿಂದ ಭೀಕರ ವಾಯುದಾಳಿ, 35 ಮಂದಿ ಸ್ಥಳದಲ್ಲೇ ಸಾವು..! ಈ ಬಗ್ಗೆ ಇಸ್ರೇಲ್ ಹೇಳಿದ್ದೇನು..?

ಕಾರವಾರ ಕಾರ್ಖಾನೆಯಲ್ಲಿ ರಾಸಾಯನಿಕ ಸೋರಿಕೆ..! 18 ಕಾರ್ಮಿಕರು ಅಸ್ವಸ್ಥ