Latestಕ್ರೈಂದೇಶ-ವಿದೇಶವೈರಲ್ ನ್ಯೂಸ್

ಅಭಿನಂದನ್‌ ವರ್ಧಮಾನ್‌ ನನ್ನು ಸೆರೆಹಿಡಿದಿದ್ದ ಪಾಕ್ ಯೋಧ ಎನ್‌ ಕೌಂಟರ್‌ ನಲ್ಲಿ ಸಾವು..! ಉಗ್ರರ ದಾಳಿ..!

966

ನ್ಯೂಸ್ ನಾಟೌಟ್: ಭಾರತೀಯ ವಾಯುಪಡೆಯ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಅವರನ್ನು ಸೆರೆಹಿಡಿದಿರುವುದಾಗಿ ಹೇಳಿಕೊಂಡಿದ್ದ ಪಾಕಿಸ್ತಾನ ಸೇನಾ ಮೇಜರ್‌ನನ್ನು ಎನ್‌ ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿದೆ.

2019 ರ ಬಾಲಕೋಟ್ ವೈಮಾನಿಕ ದಾಳಿಯ ನಂತರ ದಕ್ಷಿಣ ವಾಜಿರಿಸ್ತಾನ್ ಪ್ರದೇಶದಲ್ಲಿ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಜೊತೆಗಿನ ಎನ್ಕೌಂಟರ್‌ನಲ್ಲಿ ಪಾಕ್‌ ಸೇನೆಯ ಮೇಜರ್‌ ಮೊಯಿಜ್‌ ಅಬ್ಬಾಸ್‌ ಶಾ (37) ಹತ್ಯೆಯಾಗಿದೆ.

ಚಕ್ವಾಲ್ ಮೂಲದ ಮತ್ತು ಸೇನೆಯ ಗಣ್ಯ ವಿಶೇಷ ಸೇವಾ ಗುಂಪಿನ (SSG) ಸದಸ್ಯನಾಗಿದ್ದ ಅಬ್ಬಾಸ್, ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯ ನೇತೃತ್ವ ವಹಿಸುವಾಗ ಸಾವನ್ನಪ್ಪಿದ್ದಾನೆ. ಗುಂಡಿನ ಚಕಮಕಿಯಲ್ಲಿ ಮತ್ತೊಬ್ಬ ಸೈನಿಕ ಲ್ಯಾನ್ಸ್ ನಾಯಕ್ ಜಿಬ್ರಾನುಲ್ಲಾ ಕೂಡ ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನ ಸೇನೆ ದೃಢಪಡಿಸಿದೆ.

ಪಾಕ್‌ ಗಡಿಯೊಳಗೆ ಉಗ್ರಗಾಮಿ ಗುಂಪುಗಳು ಒಳನುಸುಳುತ್ತಿವೆ. ನಾಗರಿಕರು ಮತ್ತು ಮಿಲಿಟರಿ ಸಿಬ್ಬಂದಿಯನ್ನು ಗುರಿಯಾಗಿಸಿ ಆಗಾಗ ಉಗ್ರಗಾಮಿಗಳು ದಾಳಿ ನಡೆಸುತ್ತಿದ್ದಾರೆ. ಅವರನ್ನು ನಿಗ್ರಹಿಸಲು ಪಾಕ್‌ ಸೇನೆ ಕಾರ್ಯಾಚರಣೆ ಕೈಗೊಂಡಿತ್ತು, ಈ ವೇಳೆ ಗುಂಡಿನ ಚಕಮಕಿಯಲ್ಲಿ ಈ ಘಟನೆ ನಡೆದಿದೆ.

2019 ರಲ್ಲಿ ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತರ ಭಾರತ-ಪಾಕಿಸ್ತಾನ ಬಿಕ್ಕಟ್ಟು ಹೆಚ್ಚಾಗಿತ್ತು. ಭಾರತದ ಬಾಲಕೋಟ್ ವೈಮಾನಿಕ ದಾಳಿಯ ನಂತರ, ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಪ್ರತೀಕಾರದ ಕಾರ್ಯಾಚರಣೆಯ ಸಮಯದಲ್ಲಿ ಮಿಗ್-21 ಬೈಸನ್ ಜೆಟ್ ಅನ್ನು ಹಾರಿಸಿದರು. ಪಾಕಿಸ್ತಾನಿ ವಾಯುಪಡೆಯ ಜೆಟ್‌ಗಳೊಂದಿಗಿನ ಕಾದಾಟದಲ್ಲಿ ಇವರ ಜೆಟ್‌ ಹೊಡೆದುರುಳಿಸಲಾಯಿತು. ಪಾಕಿಸ್ತಾನ ಆಕ್ರಮಿತ ಪ್ರದೇಶದಲ್ಲಿ ಜೆಟ್‌ ಬಿದ್ದಿತು. ಅಲ್ಲಿ ಅಭಿನಂದನ್‌ ಅವರನ್ನು ಪಾಕಿಸ್ತಾನಿ ಸೇನೆ ಸೆರೆಹಿಡಿಯಿತು. ಇವರನ್ನು ಸೆರೆಹಿಡಿಯುವಲ್ಲಿ ತಾನು ಪ್ರಮುಖ ಪಾತ್ರ ವಹಿಸಿದ್ದೇನೆ ಎಂದು ಪಾಕ್‌ನ ಅಬ್ಬಾಸ್‌ ಹೇಳಿಕೊಂಡಿದ್ದ.

ಭದ್ರತೆಗಾಗಿ ಹೊಸ ಬುಲೆಟ್‌ ಪ್ರೂಫ್‌ ಕಾರು ಖರೀದಿಸಿದ ಸಲ್ಮಾನ್ ಖಾನ್..! ಜೈಲಲ್ಲಿದ್ದುಕೊಂಡೇ ನಟನ ಮೇಲೆ ಕಣ್ಣಿಟ್ಟ ಲಾರೆನ್ಸ್ ಬಿಷ್ಣೋಯ್…!

ಇಸ್ರೇಲ್ ಪರ ಬೇಹುಗಾರಿಕೆ ಮಾಡಿದ ಮೂವರನ್ನು ಇಂದು(ಜೂ.25) ಗಲ್ಲಿಗೇರಿಸಿದ ಇರಾನ್..! ಈವರೆಗೆ ಒಟ್ಟು 6 ಗುಪ್ತಚರರಿಗೆ ಗಲ್ಲು ಶಿಕ್ಷೆ..!

See also  ಆನ್‌ ಲೈನ್‌ನಲ್ಲಿ ಚಿಟ್ಟೆ ಚಾಲೆಂಜ್ ಸ್ವೀಕರಿಸಿದ ೧೪ರ ಬಾಲಕ!! ನರಳಿ ನರಳಿ ಪ್ರಾಣವೇ ಬಿಟ್ಟ!!ಅಷ್ಟಕ್ಕೂ ಏನಿದು ಚಿಟ್ಟೆ ಚಾಲೆಂಜ್?
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget