ಕ್ರೈಂವೈರಲ್ ನ್ಯೂಸ್

ಮಡಿಕೇರಿ: ಅಭಿಫಾಲ್ಸ್ ಗೆ ಹಾರಿದೆ ಎಂದು ಯಾಮಾರಿಸಿದಳಾ ಯುವತಿ..? ಕೆಲವು ಕಿ.ಮೀ. ಹುಡುಕಿದರೂ ಸುಳಿವಿಲ್ಲ..! ಕಾರ್ಯಾಚರಣೆ ಸ್ಥಗಿತಗೊಳಿಸಿದ ಎನ್‌ ಡಿಆರ್ಎಫ್ ಹೇಳಿದ್ದೇನು..?

180

ನ್ಯೂಸ್ ನಾಟೌಟ್ : ಅಭಿಫಾಲ್ಸ್ ಗೆ ಹಾರಿದೆ ಎಂದು ಯುವತಿಯೊಬ್ಬಳು ಯಾಮಾರಿಸಿರಬಹುದಾ..? ಎಂಬ ಅನುಮಾನವೊಂದು ವ್ಯಕ್ತವಾಗಿದೆ. ಯುವತಿಯ ಪತ್ತೆಗಾಗಿ ಅಭಿಫಾಲ್ಸ್ ಸುತ್ತಮುತ್ತ ಕೆಲವು ಕಿ.ಮೀ. ತನಕ ಎನ್‌ ಡಿಆರ್ಎಫ್ ಬಿಡದೆ ಹುಡುಕಾಟ ನಡೆಸಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ.

ಇದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸುವುದಕ್ಕೆ ಎನ್‌ ಡಿಆರ್ಎಫ್ ನಿರ್ಧರಿಸಿದೆ.

ಕೊಡಗಿನ ಮಡಿಕೇರಿ ಸಮೀಪವಿರುವ ಅಭಿಫಾಲ್ಸ್ ನಲ್ಲಿ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಸರಸ್ವತಿ (30) ಎಂಬವರ ಬ್ಯಾಗ್, ಚಪ್ಪಲಿ ಪತ್ತೆಯಾಗಿದ್ದವು. ಮಹಿಳೆ ಜಲಪಾತಕ್ಕೆ ಬಿದ್ದಿರಬಹುದು ಎಂದು ಶಂಕೆ ಮೂಡಿತ್ತು.

ಹೀಗಾಗಿ ಹುಡುಕಾಟ ನಡೆದಿತ್ತು. ಸೆ. 5ರಂದು ಬೆಟ್ಟದಪುರದಲ್ಲಿ ಮಹಿಳೆ ಕಾಣೆಯಾಗಿರುವ ಕುರಿತು ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಅಭಿಫಾಲ್ಸ್ ಬಳಿ ಎನ್ ಡಿಆರ್ಎಫ್ ನ 10ಕ್ಕೂ ಅಧಿಕ ಸಿಬ್ಬಂದಿ, ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

See also  ದರ್ಶನ್ ಬಳ್ಳಾರಿಗೆ ಶಿಫ್ಟ್ ಆಗುತ್ತಿದ್ದಂತೆ ಶಾಸ್ತ್ರಿ ಸಿನಿಮಾ ರೀ-ರಿಲೀಸ್..! ಕಾರಾಗೃಹದಲ್ಲಿ ಊಟಕ್ಕೆ ಚಿಕನ್, ಚಪಾತಿ, ಮುದ್ದೆ, ಸಾಂಬಾರ್, ಮಜ್ಜಿಗೆ..!
  Ad Widget   Ad Widget   Ad Widget       Ad Widget     Ad Widget   Ad Widget   Ad Widget   Ad Widget   Ad Widget   Ad Widget