ಕರಾವಳಿಕ್ರೈಂರಾಜಕೀಯರಾಜ್ಯವೈರಲ್ ನ್ಯೂಸ್

ಅಬಕಾರಿ ಅಧಿಕಾರಿಗಳ ಲಂಚಕ್ಕೆ ಬೇಸತ್ತು ರಾಜ್ಯಾದ್ಯಂತ ಪ್ರತಿಭಟನೆ..! ಮದ್ಯ ಮಾರಾಟ ಬಂದ್ ​ಗೆ ನಿರ್ಧಾರ..! ರಾಜ್ಯಪಾಲರಿಗೆ ಪತ್ರ..!

ನ್ಯೂಸ್ ನಾಟೌಟ್: ಅಬಕಾರಿ ಇಲಾಖೆಯು ಮದ್ಯದಂಗಡಿಗಳಿಂದ ‘ಮಂಥ್ಲಿ ಮನಿ’ ಹೆಸರಿನಲ್ಲಿ ಲಂಚ ಪಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಅಬಕಾರಿ ಇಲಾಖೆ ಅಧಿಕಾರಿಗಳು ಮದ್ಯ ವ್ಯಾಪಾರಿಗಳಿಂದ ಮಾಸಿಕ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಕರ್ನಾಟಕ ವೈನ್ ಮರ್ಚೆಂಟ್ ಅಸೋಸಿಯೇಷನ್ ​​ಆರೋಪಿಸಿದ್ದು, ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧ ನ.20ರಂದು ರಾಜ್ಯಾದ್ಯಂತ ಮದ್ಯದಂಗಡಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲು ಮುಂದಾಗಿದೆ.

ಈ ಹಿನ್ನೆಲೆಯಲ್ಲಿ ನವೆಂಬರ್ 20ರಂದು ರಾಜ್ಯಾದ್ಯಂತ ಮದ್ಯದಂಗಡಿ ಬಂದ್​ ಮಾಡಲು ತೀರ್ಮಾನಿಸಿದೆ. ಅಧಿಕಾರಿಗಳ ಲಂಚದ ಆಸೆಯಿಂದ ಅಂತರಾಜ್ಯ ಮದ್ಯ, ನಕಲಿ ಮದ್ಯ ಹೆಚ್ಚಳವಾಗಿದೆ. ಅಬಕಾರಿ ಇಲಾಖೆಗೆ ಮಂತ್ರಿ ಬೇಕಾಗಿಲ್ಲ. ಹಣಕಾಸು ಸಚಿವರಿಗೆ ಅಬಕಾರಿ ಇಲಾಖೆ ಜವಾಬ್ದಾರಿಗೆ ವಹಿಸುಕೊಳ್ಳುವಂತೆ ಒತ್ತಾಯಿಸಿದ್ದಲ್ಲದೆ.ರಾಜ್ಯದ ಅಬಕಾರಿ ಇಲಾಖೆಯ ಭ್ರಷ್ಟಾಚಾರ ಖಂಡಿಸಿ ಮುಷ್ಕರ ನಡೆಸಲು ಮದ್ಯದಂಗಡಿ ಮಾಲೀಕರು ನಿರ್ಧರಿಸಿದ್ದಾರೆ. ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಎಂದು ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್ ​ಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಈ ಬಗ್ಗೆ ಕರ್ನಾಟಕ ರಾಜ್ಯ ಮದ್ಯ ಮಾರಾಟಗಾರರ ಸಂಘದ ಉಪಾಧ್ಯಕ್ಷ ಕರುಣಾಕರ ಹೆಗ್ಡೆ ಮಾತನಾಡಿ, “ನವೆಂಬರ್ 20 ರೊಳಗೆ ಸಿಎಂ ನಮ್ಮ ಬೇಡಿಕೆ ಕೇಳದಿದ್ರೆ ನಾವು ರಾಜ್ಯದ ಎಲ್ಲಾ ಮದ್ಯ ಮಾರಾಟಗಾರರು ಅಂಗಡಿ ಬಂದ್ ಮಾಡುತ್ತೇವೆ. ನಾವು ಈಗಾಗಲೇ ಅಬಕಾರಿ ಸಚಿವರನ್ನ ಬದಲಿಸಿ, ಹಣಕಾಸು ಇಲಾಖೆ ಜೊತೆ ಅಬಕಾರಿ ಇಲಾಖೆ ಸೇರಿಸಿ ಎಂದು ಮನವಿ ಮಾಡಿದ್ದೇವೆ. ಹಣಕಾಸು ಇಲಾಖೆ ಸಿಎಂ ಹತ್ತಿರ ಇದ್ದರೆ ಅವರೇ ನೋಡಿಕೊಳ್ಳಲಿ. ಹಣ ವಸೂಲಿಗಾಗಿ ಸಚಿವರು ಇರೋದಾದ್ರೆ ನಮಗೆ ಅಬಕಾರಿ ಸಚಿವರ ಅವಶ್ಯಕತೆ ಇಲ್ಲ ಎನ್ನುವುದು ನಮ್ಮ ಬೇಡಿಕೆ. ಅಧಿಕಾರಿಗಳು ನೇರವಾಗಿ ಹೇಳ್ತಿದ್ದಾರೆ ನಾವು ಇಷ್ಟು ಕೋಟಿ ಕೊಟ್ಟು ಬಂದಿದ್ದೀವಿ ನಮಗೆ ಇಂತಿಷ್ಟು ಬೇಕು ದುಡ್ಡಿಲ್ಲ ಅಂದರೆ ಆಗೋದಿಲ್ಲ ಅಂತಾರೇ” ಎಂದು ಗಂಭೀರ ಆರೋಪ ಮಾಡಿದರು.

Click

https://newsnotout.com/2024/11/police-constable-kannada-news-viral-news-marriage-man/
https://newsnotout.com/2024/11/kannada-news-child-nomore-inside-the-car-which-was-locked/
https://newsnotout.com/2024/11/hd-kumaraswami-kannada-news-hd-kumaraswami-viral-news/
https://newsnotout.com/2024/11/tahashildar-office-belagavi-kannada-news-man-get-nomore/
https://newsnotout.com/2024/11/2-time-marriage-kananda-news-sunney-leon/

Related posts

ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ 8 ಆರೋಪಿಗಳಿಗೆ ಜಾಮೀನು..! 7 ವರ್ಷ ಕಳೆದರೂ 15ನೇ ಆರೋಪಿ ಇನ್ನೂ ಸಿಕ್ಕಿಲ್ಲ..!

ಬೆಳ್ತಂಗಡಿ: ವಿಷವಿಟ್ಟು 10 ಕ್ಕೂ ಹೆಚ್ಚು ನಾಯಿಗಳ ಹತ್ಯೆ..! ಆ ರಾತ್ರಿ ನಡೆದದ್ದೇನು..?

ಸಿಎಂ ಆಯ್ಕೆ ಹೈಡ್ರಾಮಕ್ಕೆ ಕೊನೆಗೂ ತೆರೆ ,ಸಿದ್ದರಾಮಯ್ಯ ಮುಖ್ಯಮಂತ್ರಿ,ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿ