ಭಕ್ತಿಭಾವ

ನೀರಿಲ್ಲದ ಜಮೀನಿನಲ್ಲಿ ನೀರುಕ್ಕಿಸಿದ ಆರಿಕೋಡಿ ಚಾಮುಂಡೇಶ್ವರಿ

496

ನ್ಯೂಸ್ ನಾಟೌಟ್ : ದೇವರು ಇದ್ದಾನೆ ಅಥವಾ ಇಲ್ಲ ಅನ್ನುವುದು ಅವರವರ ನಂಬಿಕೆಗೆ ಬಿಟ್ಟ ವಿಚಾರ. ಆದರೆ ಕೆಲವು ಬಾರಿ ದೇವರಿದ್ದಾನೆ ಅನ್ನುವ ನಂಬಿಕೆ ನಿಜವಾಗುತ್ತದೆ. ಅಂತಹ ನಂಬಿಕೆಯೊಂದು ಭಕ್ತರ ಪಾಲಿಗೆ ಆರಿಕೋಡಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ನಿಜವಾಗಿದೆ.

ಪುತ್ತೂರು ತಾಲೂಕಿನ ಕುದ್ಮಾರ್ ಗ್ರಾಮದ ಬರೆಪ್ಪಾಡಿ ಕಾರ್ಲಾಡಿ ಮನೆಯ ರತನ್ ರೈ ಎಂಬುವವರ ಮನೆಯಲ್ಲಿ ಎಷ್ಟೇ ಪ್ರಯತ್ನ ಪಟ್ಟರೂ ನೀರಿನ ವ್ಯವಸ್ಥೆ ಆಗಿಯೇ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ಶ್ರೀ ಆರಿಕೋಡಿ ಚಾಮುಂಡೇಶ್ವರಿ ದೇವಿಯ ಮೊರೆ ಹೋಗಿದ್ದಾರೆ. ದೇವಿಯ ಸನ್ನಿಧಿಯಲ್ಲಿ ಅಭಯದ ನುಡಿಯನ್ನು ಪಡೆದುಕೊಂಡರು. ಭೂಮಿಯಲ್ಲಿ ಒಂದಷ್ಟು ಸಮಸ್ಯೆ ಇದೆ. ಅದನ್ನು ಪರಿಹಾರ ಮಾಡಿ. ನಿಮಗೆ ಬೇಕಾದಷ್ಟು ನೀರು ಸಿಗುತ್ತದೆ ಎಂದು ದೇವಿ ಅಭಯ ನುಡಿ ನೀಡಿದ್ದಳು. ಅದರಂತೆ ಭೂಮಿಯಲ್ಲಿದ್ದ ಸರ್ವದೋಷಗಳನ್ನು ಪರಿಹರಿಸಿದ ಬಳಿಕ ಎಲ್ಲ ಸಮಸ್ಯೆ ಬಗೆ ಹರಿದಿದೆ. ಈ ಪ್ರಕಾರವಾಗಿ ರತನ್ ರೈ ಅವರು ತಮ್ಮ ಜಮೀನಿನಲ್ಲಿ ಮಂಗಳವಾರ ಬೋರ್ ವೆಲ್ ಕೊರೆಸಿದ್ದಾರೆ. ದೇವಿ ನುಡಿದಂತೆ ನೀರಿನ ಉಕ್ಕಿ ಹರಿದಿದೆ. ಇದರ ವಿಡಿಯೋ ಈಗ ಎಲ್ಲ ಕಡೆ ವೈರಲ್ ಆಗುತ್ತಿದೆ.

ದೇವಿ ಆಶೀರ್ವಾದದಿಂದ ನೀರು ಚಿಮ್ಮಿದ ವಿಡಿಯೋ ಇಲ್ಲಿದೆ ನೋಡಿ…

See also  ಕಾರಣಿಕ ಕ್ಷೇತ್ರ ಪಲ್ಲತ್ತಡ್ಕ ಹೊಸಮ್ಮ ದೈವದ ನೇಮೋತ್ಸವ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget