ನ್ಯೂಸ್ ನಾಟೌಟ್: ಮುಂಚೆಯೆಲ್ಲಾ ಕಳ್ಳತನ ಅಂದ್ರೆ ಎಲ್ಲರೂ ನಿದ್ರಿಸೋ ಟೈಮ್‌ನಲ್ಲೇ ನಡಿತಿತ್ತು.. ಆದರೆ ಈಗೀಗ ಕಳ್ಳತನ ಎಂಬುದು ಹಾಡಹಗಲಲ್ಲೇ ನಡಿತಿದೆ.ಕಳ್ಳರು ಕ್ಯಾರೇ ಎನ್ನದೇ ಕದಿಯುತ್ತಿರುವ ಉದಾಹರಣೆಗಳು ಸಾಕಷ್ಟಿವೆ. ಇಲ್ಲೊಂದು ಕಡೆ ಇದೀಗ ಆಪ್ ನಾಯಕನೊಬ್ಬನ ಕಾರಿನ ನಾಲ್ಕೂ ಚಕ್ರಗಳನ್ನು ಎಗರಿಸಿರುವ ಘಟನೆ ಬಗ್ಗೆ ವರದಿಯಾಗಿದೆ.
ನಗರ ಪ್ರದೇಶದಲ್ಲಿ ನಿಲ್ಲಿಸಿದ್ದ ಆಪ್ ನಾಯಕನ ಕಾರಿನ ನಾಲ್ಕೂ ಚಕ್ರಗಳನ್ನು ಕಳ್ಳರು ಎಗರಿಸಿ ಪರಾರಿಯಾಗಿದ್ದಾರೆ. ಈ ಘಟನೆ ದೆಹಲಿಯ ಪತ್ಪರ್ಗಂಜ್ ಪ್ರದೇಶದಲ್ಲಿ ನಡೆದಿದೆ.ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಅವಧ್ ಓಜಾ ಅವರಿಗೆ ಸೇರಿದ ಕಾರಿನ ಚಕ್ರಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.
ಈ ಕುರಿತು ಸ್ವತಃ ಓಜಾ ಅವರೇ ವಿಡಿಯೋ ಮಾಡಿ ಜನನಿಬಿಡ ಪ್ರದೇಶದಲ್ಲಿ ನಿಲ್ಲಿಸಿದ್ದ ತನ್ನ ಕಾರಿನ ಚಕ್ರಗಳನ್ನು ಕದ್ದೊಯ್ದಿದ್ದು ದೆಹಲಿಯಲ್ಲಿ ಬಿಜೆಪಿ ಸರಕಾರ ಆಡಳಿತಕ್ಕೆ ಬರುತ್ತಿದ್ದಂತೆ ಖದೀಮರು ಭಯವಿಲ್ಲದೆ ಜನನಿಬಿಡ ಸ್ಥಳದಲ್ಲೇ ತಮ್ಮ ಕೈಚಳಕ ತೋರಿಸುತ್ತಿದ್ದಾರೆ ಎಂದರೆ ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆ ಯಾವ ಮಟ್ಟಕ್ಕೆ ಇಳಿದಿದೆ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.
राजा जी का व्यक्तित्व बताने वाले कह रहे है टायर चोरी हो गए।
ये दिल्ली है साहब यहां लड़कियां गायब हो जाती हैं, बलात्कार वाले छूट जाते हैं फिर यह छोटी बात है टायर गायब होना#AvadhOjha | Avadh Ojha | Patparganj | #Patparganj pic.twitter.com/GsZCwjGpoP— BRIJESH PANDEY (@Pandey24Brijesh) February 28, 2025