ಕ್ರೈಂದೇಶ-ವಿದೇಶವಿಡಿಯೋವೈರಲ್ ನ್ಯೂಸ್

ರೀಲ್ಸ್ ಮಾಡುವಾಗ 300 ಅಡಿ ಕಣಿವೆಗೆ ಕಾಲು ಜಾರಿ ಬಿದ್ದ ಸೋಷಿಯಲ್ ಮೀಡಿಯಾ ಸ್ಟಾರ್..! 6 ಗಂಟೆಗಳ ಸತತ ಕಾರ್ಯಾಚರಣೆಯ ಬಳಿಕ ಮೃತದೇಹ ಪತ್ತೆ..!

ನ್ಯೂಸ್ ನಾಟೌಟ್: ರೀಲ್ಸ್ ಮಾಡಲು ಪ್ರಯತ್ನಿಸಿದ ಯುವತಿ ಕಣಿವೆಯಲ್ಲಿ ಬಿದ್ದು ಪ್ರಾಣ ಕಳೆದುಕೊಂಡ ಘಟನೆ ರಾಯಗಢದ ಕುಂಭ ಜಲಪಾತದಲ್ಲಿ ನಡೆದಿದೆ.

ಮಹಾರಾಷ್ಟ್ರದಲ್ಲಿ ಭಾರೀ ಮಳೆಯಿಂದಾಗಿ ಜಲಪಾತವೊಂದರಲ್ಲಿ ಕುಟುಂಬವೊಂದು ಎಲ್ಲರ ಕಣ್ಣೆದುರೇ ಇತ್ತೀಚೆಗೆ ಕೊಚ್ಚಿಹೋಗಿತ್ತು. ಮಹಾರಾಷ್ಟ್ರ ಮೂಲದ ಅನ್ವಿ ಕಾಮ್ದಾರ್ (26)(aanvi kamdar) ಮೃತ ಯುವತಿ ಎಂದು ಗುರುತಿಸಲಾಗಿದೆ.

ಇನ್‌ಸ್ಟಾಗ್ರಾಮ್ ನಲ್ಲಿ 2,67,000 ಕ್ಕೂ ಹೆಚ್ಚು ಫಾಲೊವರ್ಸ್ ಗಳನ್ನು ಹೊಂದಿದ್ದು, ಪ್ರವಾಸಿ ತಾಣಗಳಲ್ಲಿ ರೀಲ್ಸ್ ಮಾಡುವ ಹವ್ಯಾಸ ರೂಢಿಸಿಕೊಂಡಿದ್ದರು. ಜುಲೈ 16 ರಂದು ಅನ್ವಿ ಕಾಮ್ದಾರ್ ತನ್ನ ಸ್ನೇಹಿತರೊಂದಿಗೆ ಕುಂಭ ಜಲಪಾತಕ್ಕೆ ಹೋಗಿದ್ದಳು. ರೀಲ್ಸ್ ಮಾಡುವಾಗ ಅಪಘಾತ ಸಂಭವಿಸಿ 300 ಅಡಿ ಕಣಿವೆಯಲ್ಲಿ ಕಾಲು ಜಾರಿ ಬಿದ್ದಿದ್ದಾಳೆ. ಈ ಅಪಘಾತ ಸಂಭವಿಸಿದ ತಕ್ಷಣ, ಪೊಲೀಸರು, ಕೋಸ್ಟ್ ಗಾರ್ಡ್ ಮತ್ತು ಕೋಲಾಡ್ ರಕ್ಷಣಾ ತಂಡ ಆರು ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆ ನಡೆಸಿ ಅನ್ವಿಯ ಮೃತದೇಹವನ್ನು ಹೊರತೆಗೆದರು.ಆಸ್ಪತ್ರೆಗೆ ಕರೆದೊಯ್ಯುವ ಮುನ್ನವೇ ಆಕೆ ಸಾವನ್ನಪ್ಪಿದ್ದಾಳೆ ಎಂದು ವರದಿ ತಿಳಿಸಿದೆ.

Click 👇

https://newsnotout.com/2024/07/urvashi-rautela-video-leak-issue-kananda-news-the-clarification-on-the-incident/
https://newsnotout.com/2024/07/netravathi-river-kannada-news-6-families-under-issue-farmers-of-areca/
https://newsnotout.com/2024/07/darshan-case-issue-about-food-in-jail-high-court-order-kannada-news/
https://newsnotout.com/2024/07/america-president-kannada-news-covid-possitive-kannada-news-health/
https://newsnotout.com/2024/07/uppinangady-ksrtc-iravata-fire-kannada-news-ac-problem/

Related posts

ಮಂಗಳೂರು : ನವರಾತ್ರಿ ಉತ್ಸವದಲ್ಲಿ ಜಾತ್ರೆ ಅಂಗಡಿಗಳಿಗೆ ಕೇಸರಿ ದ್ವಜ ನೆಟ್ಟ ಪ್ರಕರಣಕ್ಕೆ ಟ್ವಿಸ್ಟ್! ಶರಣ್ ಪಂಪ್‌ವೆಲ್ ಪ್ರಕರಣಕ್ಕೆ ಹೈಕೋರ್ಟ್ ತಡೆ ನೀಡಿದ್ದೇಕೆ?

ಉಪ್ಪಿನಂಗಡಿ ಠಾಣಾ ಹೆಡ್ ಕಾನ್‌ಸ್ಟೇಬಲ್ ಕೃಷ್ಣಪ್ಪ ನಾಯ್ಕ್ ನಿಧನ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಗೆ ವೋಟ್ ಕಮ್ಮಿ ಆಗುವ ಆತಂಕ..!, ಮಂಗಳೂರಿನಲ್ಲಿ ಇಂದು ರಾತ್ರಿ ಬಿ.ಎಲ್. ಸಂತೋಷ್ ಸಭೆ