ನ್ಯೂಸ್ ನಾಟೌಟ್: ಪ್ರೀತಿಗೆ ಕಣ್ಣಿಲ್ಲ, ಪ್ರೀತಿ ಕುರುಡು ಎಂಬ ಮಾತಿದೆ.ಆದರೆ ಇತ್ತೀಚಿನ ದಿನಗಳಲ್ಲಿ ಕೈತುಂಬಾ ಸಂಬಳ, ಕಾರು, ಆಸ್ತಿ ಇದ್ರೆ ಮಾತ್ರ ಲವ್ ಎನ್ನುವ ಕಾಲಘಟ್ಟಮದುವೆ!!ನಿಮ್ಮ ಪ್ರೇಮಕಥೆ ಆಧರಿಸಿ ಸಿನಿಮಾ ಮಾಡಬಹುದೆಂದ ನೆಟ್ಟಿಗರು!!ಏನಿದು ವಿಚಿತ್ರ ಲವ್ ಸ್ಟೋರಿ?ದಲ್ಲಿಯೂ ಇಲ್ಲೊಂದು ಜೋಡಿ ಯ ಲವ್ ಸಿನಿಮಾ ರೀತಿಯಲ್ಲೇ ನಡೆದಿದೆ. ಮನೆಗೆ ಫ್ಯಾನ್ ರಿಪೇರಿಗೆ ಬಂದವನ ಪ್ರೀತಿಗೆ ಬಿದ್ದು ಯುವತಿ ಮದುವೆಯಾಗಿದ್ದಾಳೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಮುಗ್ಧ ಪ್ರೀತಿಗೆ ಅನೇಕರು ಮೆಚ್ಚಿಕೊಂಡಿದ್ದಾರೆ. ಈ ಇಬ್ಬರು ಅವರ ಪ್ರೀತಿಗೆ ಬೆಲೆ ಕೊಟ್ಟಿದ್ದಾರೆ.
ಏನಿದು ಘಟನೆ?
ಮಾಧ್ಯಮವೊಂದಕ್ಕೆ ಆಕೆ ನೀಡಿದ ಸಂದರ್ಶನದಲ್ಲಿ ಈ ಫ್ಯಾನ್ನಿಂದ ನಮ್ಮ ನಡುವೆ ಪ್ರೀತಿ ಹುಟ್ಟಿದೆ ಎಂದಿದ್ದಾಳೆ. ತನ್ನ ಮನೆಯಲ್ಲಿ ಫ್ಯಾನ್ ಕೆಲಸ ಮಾಡುತ್ತಿಲ್ಲ ರಿಪೇರಿ ಅವಶ್ಯಕತೆ ಇದೆ ಎಂದು ಯುವತಿ ಕರೆ ಮಾಡಿ ಆತನಿಗೆ ತಿಳಿಸಿದ್ದಾಳೆ. ಆತ ಬಂದು ರಿಪೇರಿ ಮಾಡಿಕೊಟ್ಟಿದ್ದಾನೆ. ಆ ನಂತರ ಆಕೆ ಅವನ ಬಳಿ ನಂಬರ್ ಕೇಳಿದ್ದಾಳೆ. ಒಂದು ವೇಳೆ ಮತ್ತೆ ಫ್ಯಾನ್ ರಿಪೇರಿಗೆ ಬಂದರೆ ಕರೆ ಮಾಡಿ ಹೇಳಬಹುದಲ್ಲ ಎಂದು ಹೇಳಿ ನಂಬರ್ ಕೇಳಿದ್ದಾಳೆ.ಈ ಕಾರಣದಿಂದಲೇ ಅವರಿಬ್ಬರಲ್ಲಿ ಪ್ರೀತಿ ಚಿಗುರಿದೆ.
ಸಂದರ್ಶನದಲ್ಲಿ ಮಾತನಾಡುತ್ತಾ ” ನನಗೆ ಆತನ ಮೇಲೆ ಮೊದಲಿನಿಂದಲೂ ಪ್ರೀತಿ ಇತ್ತು. ಅದನ್ನು ಎಲ್ಲಿಯೂ ತೋರಿಸಿಲ್ಲವಷ್ಟೇ. ಅವನಿಲ್ಲದೆ ನಾನಿಲ್ಲ ಅನ್ನುವ ಮಟ್ಟಿಗೆ ಆಕೆಗೆ ಗಮನನೇ ಕೊಡೋದಕ್ಕೆ ಅಸಾಧ್ಯವಾಯಿತಂತೆ. ಅಷ್ಟೊಂದು ಆತನನ್ನು ಪ್ರೀತಿಸುತ್ತಿದ್ದೇ ಎಂದು ಆಕೆ ಹೇಳುತ್ತಾಳೆ. ಮೊದಲಿಗೆ ಅವನು ತನ್ನ ಬಗ್ಗೆ ಹೆಚ್ಚು ಗಮನ ಹರಿಸಲಿಲ್ಲ. ಹೇಗಾದರೂ ಅವನನ್ನು ಮನೆ ಕರೆಸಿಕೊಳ್ಳಬೇಕು. ಏನಾದರೂ ಮಾಡಿ ಮಾತನಾಡಬೇಕು ಎಂದು ಅವಕಾಶಕ್ಕಾಗಿ ಕಾಯುತ್ತಿದ್ದೆ. ಫ್ಯಾನ್, ಲೈಟ್ ಅಥವಾ ಡಿಶ್ ಟೆಲಿವಿಷನ್ ರಿಪೇರಿ ಎಂದು ಆತನನ್ನು ಆಗಾಗ ಭೇಟಿ ಮಾಡುವ ಸಲುವಾಗಿ ಫೋನ್ ಮಾಡಿ ಮನೆಗೆ ಕೆರಸಿಕೊಳ್ಳುತ್ತಿದೆ ಎಂದು ಆಕೆ ಹೇಳಿದ್ದಾಳೆ.
ಹೀಗೆ ಆತನ ಜತೆಗೆ ಮಾತನಾಡಲು ಶುರು ಮಾಡಿದೆ. ನಂತರ ಇಬ್ಬರ ನಡುವೆ ಸ್ವಲ್ಪ ಆತ್ಮೀಯತೆ ಬೆಳೆಯಿತು. ಹೀಗೆ ಅವರ ನಡುವಿನ ಪ್ರೀತಿ ಪುರಾಣದ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಇವರ ಈ ಪ್ರೀತಿ ಕಥೆಗೆ ಅನೇಕರು ತಮಾಷೆಯಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೀವು ತುಂಬಾ ಮುದ್ದಾ ದ ಜೋಡಿ ಎಂದು ಕಮೆಂಟ್ ಮಾಡಿದ್ದಾರೆ. ಇದು ಒಂದು ಹೃದಯಸ್ಪರ್ಶಿ ಪ್ರೇಮಕಥೆ. ಕೆಲವರು ಇದನ್ನು ಆಧರಿಸಿ ಭೋಜ್ ಪುರಿಯಲ್ಲಿ ಸಿನಿಮಾ ಮಾಡಬಹುದು ಎಂದು ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ.
Leave beginners Bihar is not for legends even 😂
“Pankha theek karte karte pyaar ho gaya , shadi kar li🙏🏻” pic.twitter.com/KgAYVS0GYT
— Frontalforce 🇮🇳 (@FrontalForce) April 7, 2025