ವೈರಲ್ ನ್ಯೂಸ್

ಶಾರ್ಕ್ ಮೀನಿಗೆ ಆಹಾರವಾಗುತ್ತಿದ್ದ ಮಹಿಳೆ, ಕೂದಲೆಳೆ ಅಂತರದಲ್ಲಿ ಪಾರು,ವಿಡಿಯೋ ವೈರಲ್…!

ನ್ಯೂಸ್ ನಾಟೌಟ್: ಸ್ಕೂಬಾ ಡೈವಿಂಗ್ ಒಂದು ವಿಶಿಷ್ಟ ಅನುಭವ. ಎಂದೂ ಕಾಣದ ಸಮುದ್ರದಾಳದೊಳಗಿನ ಜೀವ ರಾಶಿಯ ನೋಡುವುದೇ ಒಂದು ವಿಸ್ಮಯ ಕ್ಷಣ. ಇದು ಎಷ್ಟು ಅದ್ಭುತವೂ ಅಷ್ಟೇ ಭಯಾನಕ ಕೂಡ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು ಆ ಕ್ಷಣ ಬೆಚ್ಚಿ ಬೀಳಿಸುವಂತಿದೆ.

ಸಮುದ್ರದಲ್ಲಿ ಸ್ಕೂಬಾ ಡೈವಿಂಗ್ ಮಾಡಲು ತಯಾರಾಗಿ ನಿಂತಿದ್ದ ಮಹಿಳೆ ಇನ್ನೇನು ಸಮುದ್ರಕ್ಕೆ ಜಂಪ್ ಮಾಡಬೇಕು ಅನ್ನುವಾಗಲೇ ಆಕೆ ತನ್ನ ಜೀವನದಲ್ಲೇ ಎಂದೂ ಅನುಭವಿಸದ ಅಪಾಯಕಾರಿ ಅನುಭವವನ್ನು ಪಡೆದಿದ್ದಾಳೆ. ಇನ್ನೇನು ಸಮುದ್ರಕ್ಕೆ ಇಳಿಯಬೇಕು ಎನ್ನುವಾಗಲೇ ಸಡನ್ ಆಗಿ ಬಂದ ಶಾರ್ಕ್ ಬಾಯಿ ತೆರೆದು ಆಕೆಯನ್ನು ನುಂಗಲು ಯತ್ನಿಸಿದೆ.

ತಕ್ಷಣ ಎಚ್ಚೆತ್ತ ಮಹಿಳೆ ಹಿಂದೆ ಸರಿದಿದ್ದಾಳೆ. ಸಾವಿನ ದವಡೆಯಿಂದ ಮಹಿಳೆ ಪಾರಾಗಿದ್ದಾಳೆ. ಈ ವಿಡಿಯೋ ಟ್ವಿಟರ್​ನಲ್ಲಿ ಹಂಚಲಾಗಿದ್ದು ಅನೇಕರು ಕಾಮೆಂಟ್ ಮಾಡುತ್ತಿದ್ದಾರೆ.ಈ ವಿಡಿಯೋ 2 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ.

ಈ ಘಟನೆ ನಡೆದ ಸ್ಥಳ ಯಾವುದೆಂಬ ಮಾಹಿತಿ ಇಲ್ಲ. ಸದ್ಯ ಈ ವೀಡಿಯೋ ನೋಡಿ ಅನೇಕರು ಕಾಮೆಂಟ್ ಮಾಡುತ್ತಿದ್ದಾರೆ ಅಲ್ಲದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Related posts

ಇನ್ನು ಸಿಮ್ ಕಾರ್ಡ್ ಪಡೆಯುವುದು ಸುಲಭವಲ್ಲ..! 67,000 ಸಿಮ್ ಕಾರ್ಡ್ ಡೀಲರ್‌ಗಳನ್ನು ಕಪ್ಪು ಪಟ್ಟಿಗೆ ಸೇರಿಸಿದ್ದೇಕೆ? ಈ ಬಗ್ಗೆ ಕೇಂದ್ರ ಸರ್ಕಾರ ರೂಪಿಸಿದ ನಿಯಮಗಳೇನು?

ದರ್ಶನ್ ತಲೆ ಬೋಳಿಸಿದ್ರಾ ಜೈಲು ಅಧಿಕಾರಿಗಳು..? ಅಧಿಕಾರಿಗಳ ಈ ನಿರ್ಧಾರಕ್ಕೆ ಕಾರಣವೇನು..?

ದೇಗುಲದ ಹುಂಡಿಯಲ್ಲಿ ಡೆತ್‌ ನೋಟ್‌ ಪತ್ತೆ..! ಅಷ್ಟಕ್ಕೂ ದೇವರಿಗೆ ಬರೆದ ಪತ್ರದಲ್ಲಿ ಏನಿತ್ತು..?