ಕರಾವಳಿಪುತ್ತೂರು

ಕೃಷಿ ಭೂಮಿ ಇಲ್ಲದೇ ಟೆರೇಸ್ ನಲ್ಲಿಯೇ ಕೃಷಿ ಬೆಳೆದ ಮಹಿಳೆ,ಕೇವಲ 8 ಸೆಂಟ್ಸ್ ಜಾಗದಲ್ಲಿ ಕೃಷಿಲೋಕವನ್ನೇ ಸೃಷ್ಟಿಸಿದ ಕೃಷಿಕೆ..!ನಗರದಲ್ಲಿಯೇ ಕೃಷಿ ಕ್ರಾಂತಿ ಮಾಡಿದ ಈ ಮಹಿಳೆ ಯಾರು ಗೊತ್ತಾ?

242

ನ್ಯೂಸ್ ನಾಟೌಟ್ :ಕೃಷಿ ಭೂಮಿ ಅಂದ್ರೆ ಸಾಕು ಅದರಲ್ಲಿ ತೊಡಗಿಕೊಳ್ಳಲು ಹಿಂದೇಟು ಹಾಕುವವರೇ ಹೆಚ್ಚು.ಆದರೆ ಇಲ್ಲೊಬ್ಬರು ಮಹಿಳೆ ಕೃಷಿ ಭೂಮಿ ಇಲ್ಲದಿದ್ದರೂ ನಗರದಲ್ಲಿದ್ದುಕೊಂಡು ಮನೆ ಟೆರೇಸ್ ನಲ್ಲಿಯೇ ತರಹೇವಾರಿ ತರಕಾರಿ,ಹಣ್ಣುಗಳ ಗಿಡ ಬೆಳೆದು ಸುಂದರ ತೋಟವನ್ನೇ ಸೃಷ್ಟಿ ಮಾಡಿದ್ದಾರೆ…! ಆ ಮೂಲಕ ಇತರರಿಗೂ ಸ್ಫೂರ್ತಿಯಾಗಿದ್ದಾರೆ..!

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಗರದ ಮಧ್ಯಭಾಗದಲ್ಲಿರುವ ಕಲ್ಲಿಮಾರು ಎಂಬಲ್ಲಿ ಪ್ರಫುಲ್ಲಾ ರೈ ಎಂಬ ಮಹಿಳೆ ಈ ಸಾಹಸ ಮಾಡಿದ್ದು ಸುತ್ತ ಮುತ್ತಲ ಜನರನ್ನೇ ಬೆರಗಾಗಿಸುವಂತೆ ಮಾಡಿದ್ದಾರೆ.ಅದರಲ್ಲೂ ಮಧುಮೇಹದಿಂದ ಬಳಲುತ್ತಿರುವವರಿಗೆ ಅದರ ನಿಯಂತ್ರಣಕ್ಕಾಗಿ ಪರಿಣಾಮಕಾರಿಯಾದ ಔಷಧೀಯ ಹಣ್ಣುಗಳೇ ಇವರ ಬಳಿಯಿದೆ.


ನೆಲದಲ್ಲೇ ಬೆಳೆಯಲು ಹರ ಸಾಹಸ ಪಡಬೇಕಾದ ಹಣ್ಣು ಮತ್ತು ತರಕಾರಿ ಬೆಳೆಗಳನ್ನು ಅನಾಯಾಸವಾಗಿ ಟೆರೇಸ್ ನಲ್ಲಿ ಬೆಳೆದು ಕೃಷಿ ಕ್ರಾಂತಿಯನ್ನೇ ಮಾಡಿದ್ದಾರೆ.ಇವರ ತಾರಸಿ ಕೃಷಿಯನೊಮ್ಮೆ ನೋಡಿದಾಗ ಮನಸ್ಸು ಒಂದು ಕ್ಷಣ ಹಗುರವಾಗಿ ಬಿಡುತ್ತೆ..ಸ್ವಚ್ಚ ಸುಂದರ ಪರಿಸರದ ಮಧ್ಯೆ ತಾರಸಿ ಗಿಡಗಳ ಲೋಕದ ಸೃಷ್ಟಿ ಇದೆಯಲ್ವ ಇದಂತು ಅದ್ಭುತ ..ಅಮೋಘ…


ಕೇವಲ ಎಂಟೇ ಸೆಂಟ್ಸ್ ಜಾಗದಲ್ಲಿ ಸಣ್ಣದೊಂದು ಮನೆಯ ಒಡತಿಯಾಗಿರುವ ಇವರು ತನ್ನ ಬಿಡುವಿನ ವೇಳೆಯನ್ನು ಸಂಪೂರ್ಣವಾಗಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.ಮಾರ್ಕೆಟ್ ಗೆ ಹೋಗಿ ತರಕಾರಿ ತರುವುದಕ್ಕಿಂತ ಮನೆ ಖರ್ಚಿಗಾಗಿ ತಾನು ಯಾಕೆ ಮನೆಯಲ್ಲಿಯೇ ತರಕಾರಿ ಬೆಳೆಯಬಾರದು,ತಾಜಾ ಹಣ್ಣು ತರಕಾರಿಗಳು ಆರೋಗ್ಯಕ್ಕೂ ತುಂಬಾ ಒಳ್ಳೆಯದು ಎನ್ನುತ್ತಾ ಮನೆಯಲ್ಲಿಯೇ ಟೆರೆಸ್ ಮೇಲೆ ಒಂದೆರಡು ಗಿಡಗಳನ್ನು ನೆಟ್ಟಿದ್ದೆ.ಅದು ತುಂಬಾ ಖುಷಿ ನೀಡಿತು.ಬಳಿಕ ಸೃಷ್ಟಿಯಾಗಿದ್ದೇ ಈ ಹಣ್ಣು-ತರಕಾರಿಗಳ ತಾರಸಿ ಕೃಷಿ ಲೋಕ ಅನ್ನುತ್ತಾರೆ ಪ್ರಫುಲ್ಲಾ ರೈ ಅವರು…


ಮಧುಮೇಹಿಗಳು ಹೆಚ್ಚಾಗಿ ಸೇವಿಸಬಹುದಾದಂತಹ ಹಲವು ವಿಧದ ಹಣ್ಣುಗಳು ಇವರ ತೋಟದಲ್ಲಿ ಫಲ ಬಿಡುತ್ತಿವೆ. ವಿದೇಶೀ ಹಣ್ಣುಗಳನ್ನು ಭರಪೂರವಾಗಿ ಬೆಳೆಯುತ್ತಿರುವ ಇವರ ಟೆರೇಸ್ ನಲ್ಲಿ ಡ್ರ್ಯಾಗನ್ ಫ್ರುಟ್ ಗಳ ತೋಟವೂ ರಾರಾಜಿಸುತ್ತಿದೆ. ಸುಮಾರು ಐವತ್ತಕ್ಕೂ ಮಿಕ್ಕಿದ ಡ್ರ್ಯಾಗನ್ ಫ್ರುಟ್ ಗಿಡಗಳನ್ನು ಟೆರೇಸ್ ಸುತ್ತಲೂ ಬೆಳೆದಿರುವ ಇವರು ಅರೆ..! ೮ ಸೆಂಟ್ಸ್ ಜಾಗದಲ್ಲಿ ಈ ರೀತಿಯೂ ಕೃಷಿ ಮಾಡಬಹುದಾ? ಅಂತ ಆಶ್ಚರ್ಯವಾಗದಿರದು… ಇವರ ಮನೆಗೆ ಅತಿಥಿಗಳು ಯಾರೇ ಬರ್ಲಿ.. ಅವರನ್ನು ತಾಜಾ ಹಣ್ಣುಗಳ ಮೂಲಕವೇ ಆತ್ಮೀಯತೆಯಿಂದ ಬರಮಾಡಿಕೊಳ್ಳುತ್ತಾರೆ ಪ್ರಫುಲ್ಲಾ ಅವರು..


ವಿದೇಶಗಳಲ್ಲಿ ಹೆಚ್ಚಾಗಿ ಬೆಳೆಯುವ ಡ್ರ್ಯಾಗನ್ ಫ್ರುಟ್ ಜತೆ ಜತೆಗೆ ಜೊಬೇಟಿಕಾ,ಪೀನಟ್ ,ಬಟರ್ ಫ್ರುಟ್, ಕುಮ್ಕ್ವಟ್ ,ಸಂತುಲ್, ಮುಸುಂಬಿ, ಕಿತ್ತಳೆ, ದ್ರಾಕ್ಷಿ, ಪೇರಳೆ, ಚಿಕ್ಕು, ಮಾವು, ಹಲಸು, ರಾಮ್ ಫಲ, ಸೀತಾಫಲ ,ಲಕ್ಷ್ಮಣ ಫಲ, ಹನುಮ ಫಲ, ಬುಗುರಿ ಹಣ್ಣು, ನೆಲ್ಲಿಕಾಯಿ, ನಿಂಬೆ,ಗಜನಿಂಬೆ,ಪನ್ನೇರಳೆ, ಅಂಜೂರ, ಎಗ್ ಫ್ರುಟ್, ಮ್ಯಾಜಿಕ್ ಫ್ರುಟ್, ಜಂಬೂ ನೇರಳೆ, ದಾಳಿಂಬೆ, ಅಂಬಟೆ, ಪುನರ್ಪುಳಿ ( ಬಿರಿಂಡಾ) ,ರಂಬುಟಾನ್,ಲೀಚಿ ಹೀಗೆ ನೂರಕ್ಕೂ ಮಿಕ್ಕಿದ ವೆರೈಟಿ ಹಣ್ಣುಗಳು ಇವರ ಮನೆ ತಾರಸಿಯಲ್ಲಿದೆ. ಇವಿಷ್ಟು ಮಾತ್ರವಲ್ಲದೇ ವಿವಿಧ ಪ್ರಕಾರದ ತರಕಾರಿ ಹಾಗೂ ಹೂದೋಟ ಇವರ ಟೆರೇಸ್ ನಲ್ಲಿದ್ದು ಕೃಷಿಯ ಮೇಲಿನ ಆಸಕ್ತಿಯನ್ನು ಎತ್ತಿ ತೋರಿಸುತ್ತಿವೆ.

See also  'ನೀನೇನು ಭಯ ಪಡಬೇಡ, ನಿನ್ನ ಬೆನ್ನ ಹಿಂದೆ ನಾನಿದ್ದೇನೆ' ರಿಷಬ್ ಶೆಟ್ಟಿಗೆ ದೈವದ ಅಭಯನುಡಿ..!ತೆರೆ ಮೇಲೆ ಮೂಡಿ ಬರೋ 'ಕಾಂತಾರ ಅಧ್ಯಾಯ 1' ಸಕ್ಸಸ್‌ನ ಮುನ್ಸೂಚನೆಯೇ?


ಹಳ್ಳಿಗಳಲ್ಲಿ ತರಕಾರಿ ಬೆಳೆಯೋದನ್ನು ನೋಡಿದ್ದೇವೆ ಕೇಳಿದ್ದೇವೆ.ಆದರೆ ಪಟ್ಟಣದಲ್ಲಿದ್ದುಕೊಂಡು ಇರುವ ೮ ಸೆಂಟ್ಸ್ ಜಾಗದಲ್ಲಿ ಕೃಷಿ ಕ್ರಾಂತಿಯನ್ನು ಮಾಡಿದ ಈ ಮಹಿಳೆಯ ಸಾಧನೆಗೆ ನಾವೆಲ್ಲಾ ಹ್ಯಾಟ್ಸಾಫ್ ಹೇಳಲೇ ಬೇಕು.

  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget