ವೈರಲ್ ನ್ಯೂಸ್

ಮೊಬೈಲ್‌ ಕರೆ ಮಾಡುವಂತೆ ಮಹಿಳೆಗೆ ಟಾರ್ಚರ್‌, ಆಕ್ರೋಶಗೊಂಡ ಪತಿಯಿಂದ ಡಿಶ್‌ ರಿಪೇರಿ ಬಶೀರನಿಗೆ ಹಿಗ್ಗಾಮುಗ್ಗ ಥಳಿತ.. ಇಲ್ಲಿ ನೋಡಿ ವಿಡಿಯೋ

223

ನ್ಯೂಸ್‌ ನಾಟೌಟ್‌: ಡಿಶ್‌ ರಿಪೇರಿಗೆಂದು ಬಂದು ಮಹಿಳೆಗೆ ನಂಬರ್ ಕೊಟ್ಟು ಕರೆ ಮಾಡುವಂತೆ ಪೀಡಿಸುತ್ತಿದ್ದ ವ್ಯಕ್ತಿಗೆ ಮಹಿಳೆಯ ಪತಿ ಅಟ್ಟಾಡಿಸಿ ಹೊಡೆದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಸಮೀಪದ ಕಟ್ಟಿಮನೆ ಗ್ರಾಮದಲ್ಲಿ ನಡೆದಿದೆ.

ಜಯನಗರದಲ್ಲಿ ಡಿಶ್ ರಿಪೇರಿ ಮಾಡುವ ಕೆಲಸ ಮಾಡುತ್ತಿದ್ದ ಬಶೀರ್ ಕಾಲ್ ಮಾಡುವಂತೆ ಪೀಡಿಸಿ ಏಟು ತಿಂದಿರುವ ವ್ಯಕ್ತಿ. ಪರಿಚಯದ ಮಹಿಳೆಯರಿಗೆ ಮಾತನಾಡುವ ನೆಪದಲ್ಲಿ ಮೊಬೈಲ್ ನಂಬರ್ ಕೊಡುತ್ತಿದ್ದ. ಬಳಿಕ ಕಾಲ್ ಮಾಡುವಂತೆ ಪೀಡಿಸುತ್ತಿದ್ದ ಎಂದು ಆರೋಪಿಸಲಾಗಿದೆ.

ಈ ಹಿಂದೆಯೂ ಇದೇ ಕೆಲಸ ಮಾಡಿ ಏಟು ತಿಂದಿದ್ದ ಎನ್ನಲಾಗಿದೆ. ಆದರೂ ಮಹಿಳೆಯರಿಗೆ ಟಾರ್ಚರ್ ಕೊಡುವ ಬುದ್ದಿ ಮಾತ್ರ ಬಿಟ್ಟಿರಲಿಲ್ಲ. ಕಟ್ಟೆಮನೆ ಗ್ರಾಮದ ರಮೇಶ್ ಎಂಬುವವರ ಪತ್ನಿಗೆ ಮೊಬೈಲ್ ನಂಬರ್ ನೀಡಿದ್ದ ಬಶೀರ್, ಕಾಲ್ ಮಾಡುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ. ಬಶೀರ್ ಕಾಟಕ್ಕೆ ಬೇಸತ್ತು ಹೋಗಿದ್ದ ಮಹಿಳೆ ಈ ವಿಚಾರವನ್ನು ಗಂಡನಿಗೆ ತಿಳಿಸಿದ್ದಾರೆ. ಇದರಿಂದ ಕುಪಿತಗೊಂಡು ಮಹಿಳೆಯ ಪತಿ ಕಿರುಕುಳ ನೀಡುತ್ತಿದ್ದ ಬಶೀರ್‌ನಿಗೆ ನಡುರಸ್ತೆಯಲ್ಲೇ ಅಟ್ಟಾಡಿಸಿ ಹೊಡೆದ ಘಟನೆ ನಡೆದಿದೆ. ಜಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ವರದಿಯಾಗಿದೆ.

See also  ಹೋರಿ ತಿವಿದು ಯುವಕ ಮೃತ್ಯು..! ಸಂಬಂಧಿಕರಿಂದ ಠಾಣೆಗೆ ದೂರು
  Ad Widget   Ad Widget   Ad Widget   Ad Widget   Ad Widget   Ad Widget   Ad Widget