ದೇಶ-ಪ್ರಪಂಚ

850 ಅಡಿಕೆ ಮರ ಕಡಿದಿದ್ದಾನೆನ್ನುವ ಕೇಸ್‌ಗೆ ಬಿಗ್ ಟ್ವಿಸ್ಟ್ ..!ಮಗಳನ್ನ ನಿನಗೆ ಮದುವೆ ಮಾಡ್ತೀವಿ ಎಂದು ಯುವಕನಿಂದ 25 ಲಕ್ಷ ರೂ. ದೋಚಿತ್ತು ಕುಟುಂಬ..!ಏನಿದು ಪ್ರಕರಣ?

ನ್ಯೂಸ್‌ ನಾಟೌಟ್‌: ಮಗಳನ್ನು ಮದುವೆ ಮಾಡಿಕೊಡುವುದಾಗಿ 25 ಲಕ್ಷ ರೂ. ಹಣ ಪಡೆದು ವಂಚಿಸಿದ (Cheated)  ಪ್ರಕರಣ ಈಗ ರೋಚಕ ತಿರುವು ಪಡೆದುಕೊಂಡಿರುವ ಘಟನೆ ಬಗ್ಗೆ ವರದಿಯಾಗಿದೆ. ಮೈಸೂರಿನ ಹುಣಸೂರು ತಾಲೂಕಿನ ಕಡೇಮನಗುನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬಿಗ್ ಟ್ವಿಸ್ಟ್ ಸಿಕ್ಕಿದೆ.

ವೆಂಕಟೇಶ್ ಹಾಗೂ ಲಕ್ಷ್ಮಿ ವಂಚಿಸಿದ ಕುಟುಂಬ ಎನ್ನಲಾಗಿದೆ.ವೆಂಕಟೇಶ್ ಕಳೆದ ವರ್ಷ ಮಗಳನ್ನು ಮದುವೆ ಮಾಡಿಕೊಡುವುದಾಗಿ ಅಶೋಕ್ ಎಂಬ ವ್ಯಕ್ತಿಗೆ ಒಪ್ಪಿಗೆ ನೀಡಿದ್ದರು. ಆದರೆ ಕೊನೆಗೆ ಮದುವೆಗೆ ಒಪ್ಪದೆ ವಂಚನೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. 2023ರ ಆಗಸ್ಟ್ 10 ರಲ್ಲಿ ಅಶೋಕ್ ಮೇಲೆ 850 ಅಡಿಕೆ ಮರ ಕಡಿದಿದ್ದ ಸುಳ್ಳು ಆರೋಪವನ್ನು ಕುಟುಂಬ ಮಾಡಿತ್ತು.ಇದೀಗ ಪ್ರಕರಣ ರೋಚಕ ತಿರುವು ಪಡೆದಿದೆ.

ಕಳೆದ ವರ್ಷ ವೆಂಕಟೇಶ್, ಲಕ್ಷ್ಮಿ  ದಂಪತಿ ತಮ್ಮ ಮಗಳನ್ನು ಅಶೋಕ್‌ಗೆ ಕೊಟ್ಟು ಮದುವೆ ಮಾಡುಕೊಡುವುದಾಗಿ ಒಪ್ಪಿಗೆ ನೀಡಿದ್ದರು. ಒಪ್ಪಂದದ ನಂತರ ಅಶೋಕ್ ಬಳಿ ಹುಡುಗಿ ಎರಡು ಲಕ್ಷ ಹಣ ಪಡೆದಿದ್ದು, ಆಕೆಯ ತಂದೆ 15 ಲಕ್ಷ ರೂ. ತಾಯಿ 8 ಲಕ್ಷ ರೂಪಾಯಿಗಳನ್ನು ಪಡೆದಿದ್ದಾರೆ. ಒಪ್ಪಂದದ ನಂತರ ಒಂದು ವರ್ಷದ ಅಂತರದಲ್ಲಿ 25 ಲಕ್ಷ ರೂ. ಹಣವನ್ನು ಕುಟುಂಬ ವಸೂಲಿ ಮಾಡಿದೆ. ಹಣ ಪಡೆದ ಬಳಿಕ ಒಪ್ಪಿಗೆಯಂತೆ ಮದುವೆ ಮಾಡಿಕೊಡುವಂತೆ ಅಶೋಕ್ ಕೇಳಿದಾಗ ಕುಟುಂಬ ಹಿಂದೇಟು ಹಾಕಿದೆ. ಕೊನೆಗೆ ಅಶೋಕ್ ತಾನು ನೀಡಿದ ಹಣ ವಾಪಸ್ ನೀಡುವಂತೆ ಕೇಳಿದಾಗ ಆತನ ಮೇಲೆ 850 ಅಡಿಕೆ ಮರ ಕಡಿದಿದ್ದಾನೆ ಎಂದು ಸುಳ್ಳು ಆರೋಪ ಹೊರಿಸಿ ಜೈಲಿಗೆ ಕಳುಹಿಸಿದ್ದರು. 

ಜೈಲಿನಿಂದ ಹೊರ ಬಂದ ಅಶೋಕ್ ಮೋಸಗಾರರ ವಿರುದ್ಧ ಇದೀಗ ತಿರುಗಿ ಬಿದ್ದಿದ್ದು, ದಾಖಲೆಗಳ ಸಮೇತ ಕುಟುಂಬದ ಕಳ್ಳಾಟವನ್ನು ಬಯಲು ಮಾಡಿದ್ದಾರೆ. ಹುಡುಗಿ ಕುಟುಂಬಕ್ಕೆ ಹಣ ಕೊಟ್ಟಿರುವುದರ ಬಗ್ಗೆ ಹುಡುಗಿ ಹಾಗೂ ಅಶೋಕ್ ನಡುವೆ ನಡೆದಿದ್ದ ವಾಟ್ಸಪ್ ಮೆಸೇಜ್‌ಗಳ ದಾಖಲೆಯನ್ನು ಸಲ್ಲಿಸಿದ್ದಾರೆ. ಹುಡುಗಿ ಕುಟುಂಬದ ಕಳ್ಳಾಟದ ಬಗ್ಗೆ ದಾಖಲೆಗಳ ಸಮೇತ ಅಶೋಕ್ ಬಯಲು ಮಾಡಿದ್ದಾರೆ.

ಘಟನೆ ಕುರಿತು ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಅರೋಪಿಗಳ ವಿರುದ್ಧ ದೂರು ದಾಖಲಾದರೂ ಪೊಲೀಸರು ಇನ್ನೂ ಅಶೋಕ್‌ಗೆ ನ್ಯಾಯ ಕೊಡಿಸಿಲ್ಲ. ಇದರಿಂದ ಬೇಸತ್ತ ಅಶೋಕ್ ಹೆಣ್ಣಿಗೊಂದು ನ್ಯಾಯ, ನನಗೊಂದು ನ್ಯಾಯ ಎಂದು ಪ್ರಶ್ನೆ ಮಾಡಿದ್ದಾರೆ. ನ್ಯಾಯಕ್ಕಾಗಿ ಹುಡುಗಿ ಮನೆ ಮುಂದೆ ಧರಣಿ ಕೂರಲು ಅಶೋಕ್ ನಿರ್ಧರಿಸಿದ್ದಾರೆ.

Related posts

ಬ್ರಿಜೇಶ್ ಚೌಟ ಮತ್ತು ಪದ್ಮರಾಜ್ ನಡುವೆ ಪೈಪೋಟಿ, ದಕ್ಷಿಣ ಕನ್ನಡದಲ್ಲಿ ಮತದಾನ ನಡೆದು 40 ದಿನಗಳ ಕಾಯುವಿಕೆಗೆ ಇಂದಿಗೆ(ಜೂ.4) ಅಂತ್ಯ

ವಿದೇಶದಲ್ಲಿ 2ನೇ ಮಗುವಿಗೆ ಜನ್ಮ ನೀಡಲಿದ್ದಾರೆ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ..!ಕೈಗಾರಿಕೋದ್ಯಮಿಯೊಬ್ಬರು ಹಂಚಿಕೊಂಡ ಟ್ವಿಟ್ಟರ್ ಖಾತೆ ಪೋಸ್ಟ್‌ನಲ್ಲಿ ಏನಿದೆ?

ಖಲಿಸ್ತಾನಿ ಹೋರಾಟ ಹತ್ತಿಕ್ಕಿದರೆ ಇಂದಿರಾ ಗಾಂಧಿ ಪರಿಸ್ಥಿತಿ ಅಮಿತ್‌ ಶಾಗೂ ಬರಬಹುದು!