ವೈರಲ್ ನ್ಯೂಸ್

ಮಾರ್ಗದ ಮಧ್ಯೆ ಕೆಟ್ಟು ನಿಂತ 535 ಕೋಟಿ ರೂಪಾಯಿ ನಗದು ಸಾಗಿಸುತ್ತಿದ್ದ ಟ್ರಕ್‌..!

268

ನ್ಯೂಸ್‌ ನಾಟೌಟ್‌: 1,070 ಕೋಟಿ ರೂ. ನಗದನ್ನು ಸಾಗಿಸುತ್ತಿದ್ದ ಎರಡು ಕಂಟೇನರ್ ಟ್ರಕ್‌ಗಳನ್ನು ಕೆಲಕಾಲ ಚೆನ್ನೈನ ತಾಂಬರಂ ರಸ್ತೆಯಲ್ಲಿ ನಿಲ್ಲಿಸಿದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.

ಚೆನ್ನೈನಲ್ಲಿರುವ ರಿಸರ್ವ್ ಬ್ಯಾಂಕ್ ಕಚೇರಿಯಿಂದ ಜಿಲ್ಲೆಯ ಬ್ಯಾಂಕ್‌ಗಳಿಗೆ ಕರೆನ್ಸಿ ತಲುಪಿಸಲು ವಿಲ್ಲುಪುರಂಗೆ ಈ ಟ್ರಕ್‌ಗಳು ಸಾಗುತ್ತಿತ್ತು. ಆದರೆ ಮಾರ್ಗದ ಮಧ್ಯೆ 535 ಕೋಟಿ ರೂಪಾಯಿ ನಗದು ಸಾಗಿಸುತ್ತಿದ್ದ ಒಂದು ಕಂಟೈನರ್ ಟ್ರಕ್ ಚೆನ್ನೈನಲ್ಲಿ ಕೆಟ್ಟು ನಿಂತಿತ್ತು. ಒಂದು ಟ್ರಕ್‌ನಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಎರಡೂ ಲಾರಿಗಳನ್ನು ನಿಲ್ಲಿಸಲಾಗಿದೆ. ಈ ವಿಚಾರ ತಿಳಿದು ಪೊಲೀಸರು ಸ್ಥಳದಲ್ಲಿ 100ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಿ ಟ್ರಕ್‌ಗಳಿಗೆ ರಕ್ಷಣೆ ನೀಡಿದ್ದಾರೆ. ಭದ್ರತಾ ಕಾರಣಗಳಿಗಾಗಿ ಅದನ್ನು ಚೆನ್ನೈನ ತಾಂಬರಂನಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸಿದ್ಧಕ್ಕೆ ಸ್ಥಳಾಂತರಿಸಲಾಗಿತ್ತು. ಅಲ್ಲದೇ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸಿದ್ಧಕ್ಕೆ ಪ್ರವೇಶವನ್ನು ನಿಷೇಧಿಸಲಾಗಿತ್ತು. ಆ ಬಳಿಕ ಮೆಕ್ಯಾನಿಕ್ ಗಳು ಬಂದು ದೋಷ ಸರಿಪಡಿಸಿದ ಬಳಿಕ ಟ್ರಕ್‌ಗಳನ್ನು ಸಾಗಿಸಲಾಗಿದೆ.

See also  ಹೋಟೆಲ್‌ ಗೆ ಕರೆಸಿ ಪ್ರಿಯಕರನ ಮರ್ಮಾಂಗ ಕತ್ತರಿಸಿದ ಪ್ರಿಯತಮೆ..! 8 ವರ್ಷಗಳ ಪ್ರೀತಿ ದುರಂತ ಅಂತ್ಯ..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget