ಕ್ರೈಂ

2 ವರ್ಷದ ಪುಟ್ಟ ಮಗುವನ್ನು ನೇಣಿಗೆ ಹಾಕಿ ತಾನೂ ಅತ್ಮಹತ್ಯೆ ಮಾಡಿಕೊಂಡ ತಾಯಿ..! ಈ ನಿರ್ಧಾರಕ್ಕೆ ಕಾರಣವೇನು?

231

ನ್ಯೂಸ್‌ ನಾಟೌಟ್‌ :ತಾಯಿ…ದೇವರ ಇನ್ನೊಂದು ರೂಪವೇ ತಾಯಿ.ಕಣ್ಣಿಗೆ ಕಾಣುವ ದೇವರು ಎಂದರೆ ಅದು ಅಮ್ಮ ಎಂಬುದನ್ನು ನಾವು ತಿಳಿದುಕೊಂಡಿದ್ದೇವೆ.ನಮಗೇನೆ ನೋವುಂಟಾದರೂ ಬಾಯಿಯಿಂದ ಮೊದಲು ಬರುವ ಪದವೇ ಅಮ್ಮಾ…ಹೀಗೆ ತಾಯಿ ತನ್ನ ಮಗುವಿಗಾಗಿ ಏನೇ ತ್ಯಾಗ ಮಾಡೋದಕ್ಕೂ ಸಿದ್ಧವಾಗಿರ್ತಾಳೆ.

ಆದರೆ ಇತ್ತೀಚಿಗೆ ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿದಾಗ ಬೇಸರವೆನಿಸೋದು ನಿಜ.ಮೊನ್ನೆಯಷ್ಟೇ ಸುಚನಾ ಸೇಟ್ ತನ್ನ ೪ ವರ್ಷದ ಮಗನನ್ನೇ ಮುಗಿಸಿದ್ದಳು.ಇದೀಗ ಇಲ್ಲೀಗ ಅಂತಹುದ್ದೇ ಒಂದು ಹೃದಯ ವಿದ್ರಾವಕ ಘಟನೆಯೊಂದು ವರದಿಯಾಗಿದೆ.ತಾಯಿಯೊಬ್ಬಳು ಎರಡು ವರ್ಷದ ಮಗಳನ್ನು ಕೊಂದು ತಾನೂ ಸಾವಿಗೆ ಶರಣಾಗಿರುವ ಮನಕಲಕುವ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಮರಪಳ್ಳಿ ಗ್ರಾಮದಲ್ಲಿ ನಡೆದಿದೆ.

ಶಿವಲೀಲಾ ಆನಂದ(24) ಎರಡು ವರ್ಷದ ಪುಟ್ಟ ಮಗಳನ್ನು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣಿಗೆ ಹಾಕಿದ್ದಾಳೆ.ಬಳಿಕ ತಾನೂ ನೇಣು ಹಾಕಿಕೊಂಡು ಪ್ರಾಣ ಕಳೆದುಕೊಂಡಿದ್ದಾಳೆ. ಗಂಡ ಮತ್ತು ಅತ್ತೆಯ ಕಿರುಕುಳದಿಂದ ಬೇಸತ್ತು ಶಿವಲೀಲಾ ಮಗುವನ್ನು ಕೊಂದು ತಾನೂ ಪ್ರಾಣ ಕಳೆದುಕೊಂಡಿದ್ದಾಳೆ ಎಂದು ಹೇಳಲಾಗುತ್ತಿದೆ.

See also  ಜೂಜಾಡುತ್ತಾ ಕುಳಿತಿದ್ದವರ ಮೇಲೆ ಮಧ್ಯರಾತ್ರಿ ಪೊಲೀಸ್ ದಾಳಿ..! 14 ಮಂದಿಯ ಬಂಧನ, 11 ಲಕ್ಷ ರೂ. ವಶಕ್ಕೆ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget