ಕರಾವಳಿರಾಜಕೀಯ

‘ಹರೀಶ್ ಪೂಂಜಾನ ಚೇಲಾ ಶಶಿರಾಜ್ ಶೆಟ್ಟಿ ಜತೆ ಬಾರಿ ತಿರುಗಾಡುತ್ತೀಯಾ’ಮೆಸ್ಕಾಂ ಉದ್ಯೋಗಿಯಿಂದ ಪಿಕಪ್ ವಾಹನ ತಡೆದು ಜೀವ ಬೆದರಿಕೆ, ದೂರು ದಾಖಲು

292

ನ್ಯೂಸ್ ನಾಟೌಟ್: ಮೆಸ್ಕಾಂ ಉದ್ಯೋಗಿಯೊರ್ವ ವ್ಯಕ್ತಿಯೊಬ್ಬರಿಗೆ ಜಾತಿ ನಿಂದನೆ ಮಾಡಿ ಜೀವ ಬೆದರಿಕೆಯೊಡ್ಡಿದ ಪ್ರಕರಣ ಬೆಳ್ತಂಗಡಿಯಿಂದ ವರದಿಯಾಗಿದೆ. ಪಿಕಪ್ ವಾಹನಕ್ಕೆ ಬೈಕ್ ತಂದು ಅಡ್ಡ ಇಟ್ಟು ಅವಾಚ್ಯವಾಗಿ ನಿಂದಿಸಿ ಕಾಲರ್ ಹಿಡಿದು ಎಳೆದಾಡಿದ್ದಾನೆ ಎಂದು ತಿಳಿದು ಬಂದಿದೆ. ಹಲ್ಲೆ ಮಾಡಿದ ವ್ಯಕ್ತಿ ಅಭಿಷೇಕ್ ಎಂದು ತಿಳಿದು ಬಂದಿದೆ. ಅಜೆಕಲ್ಲು ನಿವಾಸಿ ಚಂದ್ರಕಾಂತ್ ಅನ್ನುವವರು ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾರೆ.


ನೀನು ಭಾರಿ ಹಾರಾಡುತ್ತೀಯ, ಹರೀಶ್ ಪೂಂಜಾನ ಚೇಲಾ ಶಶಿರಾಜ್ ಶೆಟ್ಟಿ ಜತೆ ಬಾರಿ ತಿರುಗಾಡುತ್ತೀಯಾ, ಶಶಿರಾಜ್‌ಗೆ ಏನು ಮಾಡಬೇಕು ಎಂದು ನನಗೆ ಗೊತ್ತು. ಎಲ್ಲಿ ಮಟ್ಟ ಹಾಕಬೇಕು ಅಲ್ಲಿ ಮಟ್ಟ ಹಾಕುತ್ತೇನೆ. ನಿನ್ನ ಮತ್ತು ಶಶಿರಾಜ್‌ ಶೆಟ್ಟಿಯ ಕೈಕಾಲು ಮುರಿದು ಹೇಗೆ ಮೂಲೆಗೆ ಕೂರಿಸಬೇಕು ಅನ್ನುವುದು ನನಗೆ ಗೊತ್ತು ಎಂದು ಬೆದರಿಕೆ ಹಾಕಿದ್ದಾರೆಂದು ಚಂದ್ರಕಾಂತ್‌ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ. ಬೆಳ್ತಂಗಡಿ ಠಾಣಾ ಅಕ್ರ ೪೪/೨೦೩ ಯು/ಎಸ್‌ ೩೪೧, ೩೨೩,೫೦೬ ಐಪಿಸಿ ಮತ್ತು ಕಲಂ ೩ (೧) (ಎಸ್‌) ಎಸ್‌ಸಿ, ಎಸ್‌ಟಿ ಅಕ್ಟರ್ -೨೦೧೫ರಂತೆ ಪ್ರಕರಣ ದಾಖಲಿಸಲಾಗಿದೆ.

See also  ಫುಟ್ಬಾಲ್ ನಲ್ಲಿ ಗಿನ್ನಿಸ್ ದಾಖಲೆ ಸಾಧಿಸಿದ ಮಂಗಳೂರು ಹುಡುಗ,ವಿಶ್ವದ ಇಬ್ಬರ ದಾಖಲೆ ಮುರಿದು ಸಾಧನೆ
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget