ಬೆಂಗಳೂರು

ಜಿಮ್ ಟ್ರೈನರ್ ಪ್ರಿಯಕರನ ಕಿರುಕುಳಕ್ಕೆ ಮಿಸ್ ಆಂಧ್ರ ಬ್ಯೂಟಿ ಆತ್ಮಹತ್ಯೆ,ಡೆತ್ ನೋಟ್‌ನಲ್ಲೇನಿದೆ?

ನ್ಯೂಸ್ ನಾಟೌಟ್: ಯುವತಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಉತ್ತರ (Bengaluru North) ತಾಲೂಕಿನ ಕೆಂಪಾಪುರದಲ್ಲಿ ನಡೆದಿದೆ.ಈಕೆ ಪ್ರಿಯಕರನ (Lover) ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನುವ ವರದಿ ಲಭ್ಯವಾಗಿದೆ.

ವಿದ್ಯಾಶ್ರೀ ಸಾವಿಗೀಡಾದ ಯುವತಿ.ಈಕೆ ಕಳೆದ ಕೆಲ ಸಮಯಗಳಿಂದ ಪ್ರೀತಿಯ ಬಲೆಗೆ ಬಿದ್ದಿದ್ದು,ಪ್ರಿಯಕರನ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ (IT Company) ಕೆಲಸ ಮಾಡುತ್ತಿದ್ದ ಈಕೆ ಡೆತ್‌ನೋಟ್‌ನಲ್ಲಿ ಪ್ರಿಯಕರನ ಹೆಸರು ಬರೆದಿದ್ದಾಳೆ ಮಾತ್ರವಲ್ಲದೇ ಕಾರಣ ಬರೆದಿಟ್ಟು ಈ ಕೃತ್ಯವೆಸಗಿದ್ದಾಳೆ.

ಸದ್ಯ ಪೊಲೀಸರು ಆರೋಪಿ ಅಕ್ಷಯ್ ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಅಕ್ಷಯ್ ಹಾಗೂ ವಿದ್ಯಾಶ್ರೀ ಪರಸ್ಪರ ಪ್ರೀತಿಸುತ್ತಿದ್ದು,ಆತ ತನ್ನಿಂದ ದೂರ ಹೋಗುತ್ತಿದ್ದಾನೆ ಎಂದು ತಿಳಿದು ಅನುಮಾನಗೊಂಡ ವಿದ್ಯಾಶ್ರೀ ಈ ನಿರ್ಧಾರಕ್ಕೆ ಬಂದಿದ್ದಾಳೆ. ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ನಂತರ ಆರೋಪಿ ಅಕ್ಷಯ್‌ನನ್ನ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗಿದೆ. ಸೋಲದೇವನಹಳ್ಳಿ ಠಾಣೆಯಲ್ಲಿ (Soladevanahalli Police Station) ಕೇಸ್ ದಾಖಲಾಗಿದೆ. 


ವಿದ್ಯಾಶ್ರೀ ಕ್ರಿಯೇಟಿವ್ ಆಗಿದ್ದ ಯುವತಿ.ವೃತ್ತಿ ಜತೆಗೆ ಮಾಡೆಲ್ ಸಹ ಆಗಿದ್ದ ಆಕೆ ಅಕ್ಷಯ್ ನೊಂದಿಗೆ ಕಳೆದ ಒಂದು ವರ್ಷದಿಂದ ಪ್ರೀತಿ ಮಾಡುತ್ತಿದ್ದರು.ಆತ ವಿದ್ಯಾ ಬಳಿ 1.76 ಲಕ್ಷ ಹಣ ಪಡೆದುಕೊಂಡಿದ್ದು ಈ ಹಣವನ್ನು ವಾಪಾಸ್ ಕೇಳೋದಕ್ಕೆ ಹೊರಟಾಗ ವಿದ್ಯಾ ಮತ್ತು ಆಕೆಯ ಕುಟುಂಬದವರನ್ನ ಅವಾಚ್ಯ ಶಬ್ಧಗಳಿಂದ ಬೈಯುತ್ತಿದ್ದ ಎಂದು ತಿಳಿದು ಬಂದಿದೆ.

ಇದೇ ಕಾರಣಕ್ಕೆ ನೊಂದಿದ್ದ ಆಕೆ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ತಿಳಿದು ಬಂದಿದೆ.ಮಿಸ್ ಆಂಧ್ರ ಕಾಂಪಿಟೇಷನ್ ನಲ್ಲಿಯೂ ವಿಜೇತಳಾಗಿದ್ದ ಮೃತ ವಿದ್ಯಾಶ್ರೀ ಬಸವೇಶ್ವರ ನಗರದಲ್ಲಿ ಜಿಮ್ ಟ್ರೈನರ್ ಆಗಿದ್ದ ಆರೋಪಿ ಅಕ್ಷಯ್‌ಗೆ ಹಣ ಕೊಟ್ಟಿದ್ದರ ಬಗ್ಗೆ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾಳೆ.

`ನನ್ನ ಸಾವಿಗೆ ಅಕ್ಷಯ್ ಕಾರಣ, ಅವನು ನನ್ನ ನಾಯಿ ಥರ ಟ್ರೀಟ್ ಮಾಡ್ತಿದ್ದಾನೆ. ನನಗೆ ಕೊಡಬೇಕಾದ 1 ಲಕ್ಷದ 76 ಸಾವಿರ ದುಡ್ಡು ಕೇಳಿದರೆ, ನನಗೆ ಹಾಗೂ ನನ್ನ ಕುಟುಂಬಕ್ಕೆ ಕೆಟ್ಟ ಕೆಟ್ಟ ಮಾತಿನಲ್ಲಿ ಬೈದು ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಖಿನ್ನತೆಗೆ ಬದುಕಲು ಆಗುತ್ತಿಲ್ಲ. ದಿನೇ ದಿನೇ ನನಗೆ ತುಂಬಾ ಸ್ಟ್ರೆಸ್ ಆಗ್ತಿದೆ. ಅಮ್ಮ, ಗುರು ಮಾವ ನನ್ನನ್ನು ಕ್ಷಮಿಸಿ, ನನ್ನನ್ನು ಮರೆತುಬಿಡಿ.. ಎಲ್ಲಾ ಹುಡುಗಿಯರಿಗೆ ವಿನಂತಿ ಮಾಡುತ್ತೇನೆ ಯಾರೂ ಪ್ರೀತಿ ಮಾಡಬೇಡಿ… ಗುಡ್ ಬೈ ಟು ದಿಸ್ ವರ್ಲ್ಡ್’ ಅಂತಾ ಮೃತ ವಿದ್ಯಾಶ್ರೀ ಡೆತ್‌ನೋಟ್‌ನಲ್ಲಿ ಬರೆದಿದ್ದಾಳೆ.

Related posts

Bengaluru IT Raid: ಮಂಚದಡಿಯಲ್ಲಿ ಕಂತೆ ಕಂತೆ ನೋಟುಗಳು, ಬಾಕ್ಸ್ ನಲ್ಲಿ ರಾಶಿ ಹಣವನ್ನು ನೋಡಿ ಐಟಿ ಅಧಿಕಾರಿಗಳೇ ಶಾಕ್..!

ಬೆಂಗಳೂರು: ಮಧ್ಯ ರಾತ್ರಿ ಪಾನಮತ್ತಳಾಗಿ ದ್ವಿಚಕ್ರ ವಾಹನ ಓಡಿಸಿಕೊಂಡು ಹೋದವಳಿಗೆ ಅಪಘಾತ..! ಆಟೋ ರಿಕ್ಷಾ ಹತ್ತಿಸಿ ಕರೆದೊಯ್ದವರಿಂದ ಸಾಮೂಹಿಕ ಅತ್ಯಾಚಾರ..!

ಬೆಳ್ಳಂಬೆಳಗ್ಗೆ ರಾಕ್‌ಲೈನ್ ವೆಂಕಟೇಶ್ ಅವರಿಗೆ ಬಿಗ್ ಶಾಕ್..!ಜಾಲಹಳ್ಳಿ ರಾಕ್‌ಲೈನ್‌ ಮಾಲ್‌ಗೆ ಬಿತ್ತು ಬೀಗ..! ಕಾರಣವೇನು?