ಕರಾವಳಿ

ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿಗೆ ಅಡ್ಡ ಬಂದ ಜಿಂಕೆ..!ಜಿಂಕೆ ತಪ್ಪಿಸಲು ಹೋಗಿ ಕಾರು ಅಪಘಾತ,ಮೂವರು ಗಂಭೀರ

176

ನ್ಯೂಸ್ ನಾಟೌಟ್ :ಜಿಂಕೆಯೊಂದು ಅಡ್ಡ ಬಂತೆಂದು ತಪ್ಪಿಸಲು ಹೋಗಿ ಕಾರು (Car) ಅಪಘಾತಗೊಂಡ (Accident) ಘಟನೆ ಕಳಸದ (Kalasa) ಸಂಪಿಖಾನ್ ಬಳಿ ನಡೆದಿದೆ.ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.ಕಾರು ಚಲಿಸುತ್ತಿದ್ದ ವೇಳೆಗಾಗಲೇ ಹಠಾತ್ ಆಗಿ ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ಜಿಂಕೆ ದಾಟಿತ್ತು. ಈ ವೇಳೆ ಕಾರು ಚಾಲಕ ಜಿಂಕೆಗೆ ಕಾರು ಡಿಕ್ಕಿಯಾಗುವುದನ್ನು ತಪ್ಪಿಸಲು ತಕ್ಷಣವೇ ಬ್ರೇಕ್ ಹಾಕಿದಾಗ ಈ ಘಟನೆ ಸಂಭವಿಸಿದೆ.ಈ ವೇಳೆ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿ ರಸ್ತೆ ಬದಿಯ ದಿಬ್ಬಕ್ಕೆ ಡಿಕ್ಕಿಯಾಗಿದೆ.ಕೂಡಲೇ ಕಾರಿನಲ್ಲಿದ್ದ ಮೂವರಿಗೆ ಕಳಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮಣಿಪಾಲ್‍ಗೆ ರವಾನಿಸಿ ದಾಖಲಿಸಲಾಗಿದೆ.

ಕಾರಿನಲ್ಲಿದ್ದವರು ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. ಹೊರನಾಡು ಅನ್ನಪೂರ್ಣೇಶ್ವರಿ ದರ್ಶನ ಪಡೆದು ಮಂಗಳೂರಿಗೆ ತೆರಳುತ್ತಿದ್ದಾಗ ಈ ವೇಳೆ ಈ ದುರ್ಘಟನೆ ಸಂಭವಿಸಿದೆ. ಈ ಸಂಬಂಧ ಕಳಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

See also  ಚೈತ್ರಾ ಕುಂದಾಪುರ ವಂಚನೆ ಪ್ರಕರಣ: ಕಾವಿ ತೆಗೆದು ಟೀ ಶರ್ಟ್ ಧರಿಸಿ ಒಡಿಶಾ ರೈಲಿನಲ್ಲಿದ್ದ ಹಾಲಶ್ರೀ ಪೊಲೀಸ್ ಬಲೆಗೆ! ಇಲ್ಲಿದೆ ಪೊಲೀಸರ ರೋಚಕ ಕಾರ್ಯಾಚರಣೆಯ ಸಂಪೂರ್ಣ ಮಾಹಿತಿ
  Ad Widget   Ad Widget   Ad Widget   Ad Widget   Ad Widget   Ad Widget   Ad Widget