ಕರಾವಳಿ

ಬಸ್ಸಿನಲ್ಲಿ ವಿದ್ಯಾರ್ಥಿನಿ ಜತೆ ಮಾತನಾಡಿದ್ದಕ್ಕೆ ತಂಡದಿಂದ ಹಲ್ಲೆ -ಮೂವರ ವಿರುದ್ಧ ಪ್ರಕರಣ ದಾಖಲು

ನ್ಯೂಸ್ ನಾಟೌಟ್: ಬಸ್ಸಿನಲ್ಲಿ ವಿದ್ಯಾರ್ಥಿನಿ ಜತೆ ಮಾತನಾಡಿದ ವಿಚಾರವಾಗಿ ತಂಡವೊಂದು ವಿದ್ಯಾರ್ಥಿಗೆ ಹಲ್ಲೆ ನಡೆಸಿದ್ದು, ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏನಿದು ಘಟನೆ?

ವೀರಕಂಬ ಗ್ರಾಮದ ಮಂಗಳಪದವು ನಿವಾಸಿ ಖಲಂದರ್ ಅಬ್ಬಾಸ್ ಅವರ ಪುತ್ರ ಮಹಮ್ಮದ್‌ ಶಾಕೀರ್‌ ಎಂಬಾತ ನೀಡಿದ ದೂರಿನಂತೆ ಕೆಲಿಂಜ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.ಮಂಗಳೂರು ಖಾಸಗಿ ಕಾಲೇಜಿನ ವಿದ್ಯಾರ್ಥಿಯಾಗಿರುವ ಶಾಕೀರ್‌, ಗುರುವಾರ ಕಾಲೇಜು ಮುಗಿಸಿ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಮನೆಗೆ ಬರುತ್ತಿದ್ದ. ಈ ವೇಳೆ ಪಕ್ಕದ ಸೀಟಿನಲ್ಲಿ ಕುಳಿತಿದ್ದ ವಿದ್ಯಾರ್ಥಿನಿಗೆ ಚಾಕಲೇಟು ಬೇಕೆ ಎಂದು ಕೇಳಿದ್ದನೆನ್ನಲಾಗಿದೆ. ಇದನ್ನು ಪ್ರಶ್ನಿಸಿ ವೀರಕಂಭ ಗ್ರಾಮದ ಕೆಲಿಂಜ ಎಂಬಲ್ಲಿಗೆ ಬಸ್ ತಲುಪಿದಾಗ ಬಸ್ಸಿಗೆ ಏಕಾಏಕಿಯಾಗಿ ಆರೋಪಿಗಳು ಹಾಗೂ ಇತರ 3 ಜನರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.ಈ ಬಗ್ಗೆ ಶಾಕೀರ್ ಪೊಲೀಸರಿಗೆ ದೂರು ನೀಡಿದ್ದಾನೆ. ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.

Related posts

ರಷ್ಯಾ ಸೇನೆಯಲ್ಲಿ ಸಿಲುಕಿದ್ದ ಕರ್ನಾಟಕದ 3 ಯುವಕರು ಮರಳಿ ಮನೆಗೆ, ಕೆಲಸದ ಆಮಿಷವೊಡ್ಡಿ ಹಣ ಪಡೆದು ರಷ್ಯಾಕ್ಕೆ ಕಳುಹಿಸಿದ್ದ ಏಜೆಂಟ್..!

ಕಾರ್ಕಳ : ಇಂಧನ ಸಚಿವ ವಿ. ಸುನೀಲ್ ಕುಮಾರ್ ಏ.19 ರಂದು ನಾಮಪತ್ರ ಸಲ್ಲಿಕೆ

ಸುಳ್ಯ: ಎನ್ನೆಂಸಿ ನೇಚರ್ ಕ್ಲಬ್ ನಿಂದ ಪರಿಸರ ಜಾಗೃತಿ ಶಿಕ್ಷಣ ಕನ್ನಡ ಪೆರಾಜೆ ಶಾಲಾ ವಠಾರದಲ್ಲಿ ಗಿಡ ನಾಟಿ, ಉತ್ತಮ ಪೋಷಣೆಗೆ ವಿಶೇಷ ಬಹುಮಾನ