ಕರಾವಳಿದೇಶ-ವಿದೇಶ

ಐಫೋನ್ 16 ಮ್ಯಾಕ್ಸ್ ಪ್ರೋ ಹಿಡಿದುಕೊಂಡೇ ಭಿಕ್ಷೆ ಬೇಡುತ್ತಿರುವ ಭಿಕ್ಷುಕ, ವೈರಲ್ ಆದ ವಿಡಿಯೋ

ನ್ಯೂಸ್ ನಾಟೌಟ್: ಕೈಯಲ್ಲಿ ಐಫೋನ್ 16 ಮ್ಯಾಕ್ಸ್ ಪ್ರೋ ಹಿಡಿದುಕೊಂಡೇ ಭಿಕ್ಷೆ ಬೇಡುತ್ತಿರುವ ಭಿಕ್ಷುಕನ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ. ಇದನ್ನು ಕಂಡಿರುವ ಇಂಟರ್​ನೆಟ್ ಜಗತ್ತು ಬೆಚ್ಚಿ ಬಿದ್ದಿದೆ. ಒಂದು ಐಫೋನ್ 16 ಪ್ರೋ ಮ್ಯಾಕ್ಸ್​ ಪಡೆಯಲು ನಾವು ಹಲವಾರು ತಿಂಗಳು ದುಡಿಯಬೇಕು. ಅಷ್ಟಾದರೂ ಇಎಂಐನಲ್ಲಿ ಹಣ ಹೊಂದಿಸೋಕೆ ಒದ್ದಾಡಿ ಬಿಡುತ್ತಿದ್ದಾರೆ.

ಆದರೆ ಈ ಭಿಕ್ಷುಕ ಇಷ್ಟೊಂದು ಸಲೀಸಾಗಿ ಖರೀದಿ ಮಾಡಿ ಅದನ್ನು ಹಿಡಿದುಕೊಂಡೇ ಭಿಕ್ಷೆ ಬೇಡುತ್ತಿದ್ದಾನಲ್ಲ ಎಂದು ಬೆಕ್ಕಸ ಬೆರಗಾಗಿಬಿಟ್ಟಿದ್ದಾರೆ. ಐಫೋನ್ ಹಿಡಿದುಕೊಂಡು ಭಿಕ್ಷೆ ಬೇಡುತ್ತಿದ್ದವನ ಹೆಸರು ಶೇಖ್ ಎಂದು ಎನ್ನಲಾಗಿದೆ. ಈತ ಐಫೋನ್ 16 ಪ್ರೋ ಮ್ಯಾಕ್ಸ್ ಹಿಡಿದುಕೊಂಡು ಭಿಕ್ಷೆ ಬೇಡುತ್ತಿರುವ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿಶೇಷ ಚೇತನ ಆಗಿರುವ ಈ ಭಿಕ್ಷುಕನನ್ನು ಅನೇಕರ ಸಂದರ್ಶನ ಮಾಡಿದ್ದಾರೆ ತನ್ನ ಸಂದರ್ಶನದಲ್ಲಿ ನಾನು 1.70 ಲಕ್ಷ ರೂಪಾಯಿ ಕ್ಯಾಶ್ ಕೊಟ್ಟು ಐಫೋನ್ ಸ್ಟೋರ್​ನಲ್ಲಿ ಈ ಐಫೋನ್​ 16 ಮ್ಯಾಕ್ಸ್ ಪ್ರೋ ಖರೀದಿಸಿದ್ದೀನಿ ಎಂದು ಹೇಳಿದ್ದಾನೆ. ಮಧ್ಯವರ್ಗದ ಜನರ ಬದುಕಿಗಿಂತ ಭಿಕ್ಷಕರ ಬದುಕೇ ಸಾವಿರ ಪಾಲು ಮೇಲು ಅಂತ ಜನ ಕಾಮೆಂಟ್ ಮಾಡುತ್ತಿದ್ದಾರೆ.

Related posts

ಮಂಗಳೂರು: ಮನೆಯವರಿಗೆ ಹಲ್ಲೆ ಮಾಡಿ ಕಾರು ಕದ್ದು ಮುಲ್ಕಿಯಲ್ಲಿ ತಂದಿಟ್ಟ ಕಳ್ಳರು..! ಬೆರಳಚ್ಚು ತಜ್ಞರಿಂದ ಪರಿಶೀಲನೆ

44 ವರ್ಷಗಳ ಬಳಿಕ ಬಾಗಿಲು ತೆರೆದ ಮತ್ತೊಂದು ದೇವಾಲಯ..! ಕೋಮು ಹಿಂಸಾಚಾರ ಮರೆತು ಗ್ರಾಮಸ್ಥರಿಂದ ಸಹಕಾರ

‘ಆತ್ಮಸಾಕ್ಷಿಗೆ ಒಪ್ಪುವಂತೆ ನಾಯಕತ್ವ ಬೆಳೆಸಿಕೊಳ್ಳಿ’ ವಿದ್ಯಾರ್ಥಿಗಳಿಗೆ ಡಾ.ಶ್ರೀ ಧರ್ಮಪಾಲನಾಥ ಸ್ವಾಮೀಜಿ ಕರೆ