ನ್ಯೂಸ್ ನಾಟೌಟ್ : ವಿಶ್ವ ಹಿಂದೂ ಪರಿಷತ್, ಬಜರಂಗದಳ ಗೋಳಿತ್ತೊಟ್ಟು ಘಟಕ ಹಾಗೂ ಉಪ್ಪಿನಂಗಡಿ ಪ್ರಖಂಡ ವತಿಯಿಂದ ಭಾನುವಾರ ಎ.ಜೆ.ಆಸ್ಪತ್ರೆ ಮಂಗಳೂರು ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರ ನಡೆಯಿತು.
ಗೋಳಿತ್ತೊಟ್ಟು ಬಜರಂಗದಳದ ಘಟಕದ ಸಕ್ರಿಯ ಸದಸ್ಯ ಮಹೇಶ್ ಡೆಬ್ಬೆಲಿ ಸ್ಮರಣಾರ್ಥವಾಗಿ ಬೃಹತ್ ರಕ್ತದಾನ ಶಿಬಿರವನ್ನು ಶ್ರಿ ಸಿದ್ದಿವಿನಾಯಕ ಭಜನಾ ಮಂದಿರದ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಚಾಲಕರಾದ ರಘು ಸಕಲೇಶಪುರ ಶಿಬಿರ ಉದ್ಘಾಟಿಸಿದರು. ಅತಿಥಿಗಳಾಗಿ ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಉಪಾಧ್ಯಕ್ಷ ಭಾಸ್ಕರ ಧರ್ಮಸ್ಥಳ, ಜಿಲ್ಲಾ ಸಹ ಕಾರ್ಯದರ್ಶಿ ನವೀನ್ ನೆರಿಯ, ಎ.ಜೆ.ಆಸ್ಪತ್ರೆಯ ರಕ್ತನಿಧಿ ಕೇಂದ್ರದ ವ್ಯವಸ್ಥಪಕ ಗೋಪಾಲಕೃಷ್ಣ, ವಿಶ್ವ ಹಿಂದೂ ಪರಿಷತ್ ಉಪ್ಪಿನಂಗಡಿ ಪ್ರಖಂಡದ ಅದ್ಯಕ್ಷ ಸುದರ್ಶನ್ , ಶ್ರೀ ಸಿದ್ದಿ ವಿನಾಯಕ ಸೇವಾ ಸಮಿತಿ ಅಧ್ಯಕ್ಷ ಬಾಲಕೃಷ್ಣ ಅಲೆಕ್ಕಿ, ಪ್ರಗತಿಪರ ಕೃಷಿಕರಾದ ವೆಂಕಟ್ರಮಣ ಸುಲ್ತಾಜೆಯವರು ಭಾಗವಹಿಸಿದ್ದರು. ದಿ.ಮಹೇಶ್ ಡೆಬ್ಬೆಲಿಯವರ ತಂದೆ ನೊಣಯ್ಯ ಡೆಬ್ಬೆಲಿ, ಸ್ಥಾನಿಯ ಘಟಕದ ಅಧ್ಯಕ್ಷರಾದ ಡೀಕಯ್ಯ ಪೂಜಾರಿ,ಗೋಳಿತ್ತೊಟ್ಟು ಬಜರಂಗದಳ ಸಂಚಾಲಕ ರೋಹಿನಾಥ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಜರಂಗದಳ ಉಪ್ಪಿನಂಗಡಿ ಪ್ರಖಂಡ ಸಂಚಾಲಕ ಮೂಲಚಂದ್ರ ಅವರು ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಭಾಷ್ ಪುರ ಇವರು ಕಾರ್ಯಕ್ರಮ ನಿರ್ವಹಿಸಿ ನಾಗೇಶ್ ಪೆರಣ ವಂದನಾರ್ಪಣೆ ಮಾಡಿದರು. ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಹಕಾರ್ಯದರ್ಶಿ ನವಿನ್ ನೆರಿಯರವರು ರಕ್ತದಾನ ಮಾಡುವ ಮುಖಾಂತರ ಶಿಬಿರಕ್ಕೆ ಚಾಲನೆ ನೀಡಿದರು. ಶಿಬಿರದಲ್ಲಿ ಒಟ್ಟು ೮೩ ರಕ್ತದಾನಿಗಳು ರಕ್ತದಾನ ಮಾಡಿದರು.