ನ್ಯೂಸ್ ನಾಟೌಟ್ : ಅವಿವಾಹಿತ ಯುವತಿಯೊಬ್ಬಳು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು, ಆ ಇಬ್ಬರೂ ಮಕ್ಕಳ ಹುಟ್ಟಿಗೆ ಅವಳಿ ಅಪ್ಪಂದಿರು ಕಾರಣಕರ್ತರಾಗಿದ್ದಾರೆ. ಅರೆ, ಇದು ಹೇಗೆ ಸಾಧ್ಯ ಅಂತೀರಾ. ಕಿಲಾಡಿ ರಸಿಕ ಹುಡುಗಿ ಅದನ್ನು ಸಾಧ್ಯ ಮಾಡಿದ್ದಾಳೆ, ಹೇಗೆ ಅಂತ ನೋಡಲು ಈ ಪೋಸ್ಟ್ ಓದಿ.
ಯುವತಿಯೊಬ್ಬಳಿಗೆ ಅವಳಿ ಮಕ್ಕಳು ಜನಿಸಿದ್ದಾರೆ. ಈ ಎರಡು ಮಕ್ಕಳು ಕೂಡಾ ನೋಡಲು ವಿಭಿನ್ನ ರೂಪದಲ್ಲಿ ಮತ್ತು ಬಣ್ಣದಲ್ಲಿ ಜನಿಸಿದ ಕಾರಣ ಯುವತಿಗೆ ಯಾಕೋ ಅನುಮಾನ ಶುರು ಆಗಿದೆ. ತನ್ನ ಮಗುವಿನ ತಂದೆ ಯಾರೆಂದು ಪತ್ತೆಹಚ್ಚಲು ಮುಂದಾದ ಯುವತಿ ಡಿಎನ್ಎ ಟೆಸ್ಟ್ ರಿಪೋರ್ಟ್ ಮಾಡಿಸಿಕೊಂಡಿದ್ದು, ಆ ರಿಪೋರ್ಟ್ ನೋಡಿ ಆಕೆ ಶಾಕ್ ಆಗಿದ್ದಾಳೆ. ತನ್ನ ಇಬ್ಬರು ಅವಳಿ ಮಕ್ಕಳ ಹುಟ್ಟಿಗೆ ಇಬ್ಬರು ವ್ಯಕ್ತಿಗಳು ಕಾರಣ ಆಗಿದ್ದು, ಯುವತಿ ಈಗ ಅವಳಿ ಅಪ್ಪಂದಿರ ಅವಳಿ ಮಕ್ಕಳ ಏಕೈಕ ಅಮ್ಮ ಆಗಿದ್ದು, ವೈದ್ಯಲೋಕದ ವಿಸ್ಮಯಕ್ಕೆ ಕಾರಣವಾಗಿದ್ದಾಳೆ.
ಅಷ್ಟಕ್ಕೂ ಅದು ಹೇಗೆ ಸಾಧ್ಯ ಆಯಿತು ಎನ್ನುವುದಕ್ಕೆ ನಾವು ಆ ಹುಡುಗಿಯ ಮಾತನ್ನು ಆಲಿಸಬೇಕು. ಇದಕ್ಕೆಲ್ಲ ಕಾರಣ ಹುಡುಗಿಯ ಕೈಚಳಕ. ಅಂದು ಈ ಹುಡುಗಿ ಒಂದೇ ದಿನ ಇಬ್ಬರು ಹುಡುಗರ ಜತೆ ಬ್ಯಾಕ್ ಟು ಬ್ಯಾಕ್ ಲೈಂಗಿಕ ಸಂಪರ್ಕ ಮಾಡಿದ್ದಳು. ಅವಳ ಅದೃಷ್ಟಕ್ಕೋ ಅಥವಾ ದುರಾದೃಷ್ಟಕ್ಕೊ ಗೊತ್ತಿಲ್ಲ, ಎರಡೂ ಕಡೆಯಿಂದ ಗರ್ಭ ಕಚ್ಚಿಕೊಂಡಿತ್ತು.
ಈ ವಿಚಾರವಾಗಿ ಪ್ರತಿಕ್ರಿಯಿಸಿದ ಆ ಯುವತಿ, ತನ್ನ ಇಬ್ಬರೂ ಮಕ್ಕಳಿಗೆ ಹೋಲಿಕೆ ಇರಲಿಲ್ಲ. 8 ತಿಂಗಳ ಬಳಿಕ ತಂದೆ ಯಾರಿರಬಹುದು ಎಂಬುವುದರ ಬಗ್ಗೆ ಅನುಮಾನ ಮೂಡಲು ಆರಂಭವಾಯಿತು. ಹೀಗಾಗಿ ಎಂಟು ತಿಂಗಳ ಶಿಶುಗಳನ್ನು ಡಿಎನ್ಎ ಪರೀಕ್ಷೆಗೆ ಒಳಪಡಿಸಿದಾಗ ಫಲಿತಾಂಶದಲ್ಲಿ ಒಂದು ಮಗು ಮಾತ್ರ ತಂದೆಯ ಹೋಲಿಕೆಯನ್ನು ಹೊಂದಿದೆ. ಅನುಮಾನದಿಂದ ಮತ್ತೆ ಪರೀಕ್ಷಿಸಿದಾಗಲೂ ಇದೇ ಫಲಿತಾಂಶ ಬಂದಿದೆ. ಈ ವೇಳೆ ಆ ಯುವತಿ ಒಂದೇ ದಿನ ಇಬ್ಬರ ಜೊತೆ ಲೈಂಗಿಕ ಸಂಪರ್ಕ ಬೆಳೆಸಿದ ವಿಚಾರ ಬೆಳಕಿಗೆ ಬಂದಿದೆ. ಅಷ್ಟೆ ಅಲ್ಲ, ಆ ಇಬ್ಬರು ಗಂಡಸರ ಜತೆ ಆಕೆ ನಡೆಸಿದ ಸೆಕ್ಸ್ ನ ಮಧ್ಯೆ ಕೂಡಾ ಜಾಸ್ತಿ ಗ್ಯಾಪ್ ಇರಲಿಲ್ಲ ಅಂತೆ. ಅದನ್ನು ಆಕೆ ಆ ನಂತರ ಒಪ್ಪಿಕೊಂಡಿದ್ದಾಳೆ.
ಈ ಬಗ್ಗೆ ಯುವತಿಗೆ ಚಿಕಿತ್ಸೆ ನೀಡಿದ ವೈದ್ಯ ತುಲಿಯೊ ಜಾರ್ಜ್ ಫ್ರಾಂಕೊ ಅವರು ಮಾತಾಡಿದ್ದಾರೆ. ಅವಳಿ ಜವಳಿ ಅಪ್ಪ ಮಕ್ಕಳ ಪ್ರಕರಣಗಳು ತೀರಾ ಅಪರೂಪ.10 ಲಕ್ಷದಲ್ಲಿ ಒಂದು ಪ್ರಕರಣ ಇಂತಹ ರೀತಿ ಆಗುವ ಸಂಭವ ಇರುತ್ತದೆ. ಇದಕ್ಕೆ ವೈಜ್ಞಾನಿಕ ಪರಿಭಾಷೆಯಲ್ಲಿ ಹೆಟೆರೊಪರೆಂಟಲ್ ಸೂಪರ್ಫೆಕಂಡೇಶನ್ ಎನ್ನುತ್ತಾರೆ. ಇಲ್ಲಿಯತನಕ ಗಮನಕ್ಕೆ ಬಂದ ಪ್ರಕರಣಗಳಲ್ಲಿ ಪ್ರಪಂಚದಾದ್ಯಂತ ಕೇವಲ 20 ಪ್ರಕರಣಗಳಿವೆ. ವಿವಿಧ ವ್ಯಕ್ತಿಗಳ ಅವಳಿ ಮಕ್ಕಳಿಗೆ ಮಹಿಳೆ ಜನ್ಮ ನೀಡುವ ಅತ್ಯಂತ ಅಪರೂಪದ ವಿದ್ಯಮಾನ ಇದಾಗಿದೆ ಎಂದಿದ್ದಾರೆ ಆ ವೈದ್ಯರು.
ವೈಜ್ಞಾನಿಕವಾಗಿ ನೋಡುವುದಾದರೆ, ಋತುಚಕ್ರದ ಸಮಯದಲ್ಲಿ ಬಿಡುಗಡೆಯಾದ ಎರಡು ಅಂಡಾಣುಗಳು ವೀರ್ಯಕ್ಕಾಗಿ ಕಾದು ಕುಳಿತಿವೆ. ಇವುಗಳಲ್ಲಿ ಓರ್ವ ಹುಡುಗನ ವೀರ್ಯವು ಒಂದು ಅಂಡಾಣುವಿನ ಒಳಹೊಕ್ಕು ಫಲಿತಗೊಂಡಿದೆ. ಅಷ್ಟರಲ್ಲಿ ಇನ್ನೊಬ್ಬನ ವೀರ್ಯಾಣು ಒಳಕ್ಕೆ ಹರಿದಿದೆ. ಆಗ ಅಲ್ಲಿ ಇನ್ನೊಂದು ಅಂಡಾಣು ಕಾದು ಕೂತಿದ್ದು, ಅದು ಎರಡನೆಯವನು ವೀರ್ಯದ ಜತೆ ಸಂಧಾನ ನಡೆಸಿ ಗರ್ಭ ಮೂಡಿಸಿದೆ. ಹಾಗೆ ಎರಡೂ ಅಂಡಾಣುವು ಪ್ರತ್ಯೇಕ ಲೈಂಗಿಕ ಸಂಭೋಗದಲ್ಲಿ ಬೇರೆ ಪುರುಷರ ವೀರ್ಯ ಗಳಿಂದ ಆಕ್ರಮಿಸಲ್ಪಟ್ಟು ಎರಡೂ ಏಕಕಾಲದಲ್ಲಿ ಫಲವತ್ತಾಗಿದೆ. ಇಂತಹ ಸಂದರ್ಭದಲ್ಲಿ ಅವಳಿ ತಂದೆ, ಜವಳಿ ಮಕ್ಕಳ ಸನ್ನಿವೇಶ ಸಂಭವಿಸುತ್ತದೆ.