ನ್ಯೂಸ್ ನಾಟೌಟ್: ಜೆಡಿಎಸ್ ರಾಜ್ಯ ವಕ್ತಾರರಾಗಿ ಸುಳ್ಯದ ಎಂ.ಬಿ. ಸದಾಶಿವ ನೇಮಕಗೊಂಡಿದ್ದಾರೆ. ಸುಳ್ಯದ ಜವುಳಿ ಉದ್ಯಮಿ ಎಂ.ಬಿ. ಸದಾಶಿವರವರು ಹಿರಿಯ ಜೆಡಿಎಸ್ ಮುಖಂಡರಾಗಿದ್ದಾರೆ.
ಈ ಹಿಂದೆ ಜೆಡಿಎಸ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ, ರಾಜ್ಯ ಉಪಾಧ್ಯಕ್ಷರಾಗಿಯೂ ಎಂ.ಬಿ. ಸದಾಶಿವರು ಕಾರ್ಯನಿರ್ವಹಿಸಿದ್ದರು. ಹಾಲಿ ಶಾಸಕರು, ಸಂಸದರು, ಮಾಜಿ ಶಾಸಕರುಗಳನ್ನೊಳಗೊಂಡ 62 ಜನರನ್ನು ರಾಜ್ಯ ವಕ್ತಾರರನ್ನಾಗಿ ಜೆಡಿಎಸ್ ರಾಜ್ಯಧ್ಯಕ್ಷ ಸಿ.ಎಂ ಇಬ್ರಾಹಿಂ ಆದೇಶ ಮಾಡಿದ್ದಾರೆ.