Uncategorized

ಗರ್ಭಿಣಿ ಶ್ವಾನಕ್ಕೆ ಸೀಮಂತ, ಫೋಟೋ ವೈರಲ್

ನ್ಯೂಸ್‌ ನಾಟೌಟ್: ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಗರ್ಭಿಣಿಗೆ ಸೀಮಂತ ಮಾಡಿ ಮನೆ ಮಂದಿ ಸಂಭ್ರಮ ಪಡುತ್ತಾರೆ. ಆದರೆ ಇಲ್ಲೊಂದು ಮನೆ ಮಂದಿ ತಮ್ಮ ಮನೆಯ ಗರ್ಭಿಣಿ ಸಾಕು ನಾಯಿಗೆ ಸೀಮಂತ ಮಾಡಿ ಸುದ್ದಿಯಾಗಿದ್ದಾರೆ.

ಸದ್ಯ ಈ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಗುರುಪುರದ ಆಣೆ ಬಳಿಯ ಆಗಸರ ಗುಡ್ಡೆ ಎಂಬಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.

ಬಾಸ್ಕರ ಮಡಿವಾಳ-ಮಂಜುಳಾ ದಂಪತಿ ನಾಲ್ಕು ದಿನಗಳ ಹಿಂದೆ ತಮ್ಮ ಸಾಕುನಾಯಿಗೆ ಸೀಮಂತ ನಡೆಸಿರುವುದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶ್ವಾನವನ್ನು ಖುಚರ್ಚಿಯಲ್ಲಿ ಕೂರಿಸಲಾಗಿದೆ. ಬಗೆಬಗೆಯ ಭಕ್ಷ್ಯ ಭೋಜನಗಳನ್ನು ಸಿಹಿ ತಿಂಡಿ , ಐಸ್ ಕ್ರೀಂ ಗಳನ್ನು ಬಡಿಸಿದ್ದಾರೆ. ಶ್ವಾನವು ತನಗೆ ಬೇಕಾದಷ್ಟುನ್ನು ಸಂತೃಪ್ತಿಯಿಂದ ತಿಂದಿದೆ.

Related posts

ಕೆಜಿಎಫ್‌ ಸಿನಿಮಾದಲ್ಲಿ ನೀವು ನೋಡಿರುವ ಈ ಅಜ್ಜನ ಸ್ಥಿತಿ ಗಂಭೀರ..!

ಯೋಧ ಹಾಗೂ ಕುಟುಂಬದ ಮೇಲಿನ ಹಲ್ಲೆ ಖಂಡಿಸಿ ಹಿಂದೂ ಸಂಘಟನೆಗಳ ಬೃಹತ್‌ ಪ್ರತಿಭಟನೆ

ಕೆಲಸ ಖಾಲಿ ಇದೆ,ತಿಂಗಳಿಗೆ 30,000 ರೂ. ಸಂಬಳವಂತೆ..!ಏನು ಕೆಲಸ ಗೊತ್ತಾ..ನಿಮ್ಗೆ ಶಾಕ್ ಆಗೋದು ಗ್ಯಾರಂಟಿ..!ವಿಡಿಯೋ ವೀಕ್ಷಿಸಿ