ನ್ಯೂಸ್ ನಾಟೌಟ್ : ದಕ್ಷಿಣ ಕನ್ನಡ ಜಿಲ್ಲೆಯ ಸಂಪಾಜೆಯಲ್ಲಿ ಉಂಟಾಗಿದ್ದ ಭಾರಿ ಪ್ರವಾಹದಿಂದ ನದಿಯಲ್ಲಿ ಉಂಟಾಗಿರುವ ಹೂಳನ್ನು ಕೂಡಲೇ ತೆಗೆಸಿಕೊಡಬೇಕೆಂದು ಸಚಿವ ಎಸ್.ಅಂಗಾರ ಅವರಿಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಸಂಪಾಜೆ ಗ್ರಾಮ ವ್ಯಾಪ್ತಿಯಲ್ಲಿ ಪಯಸ್ವಿನಿ ನದಿ ಉಕ್ಕಿ ಹರಿದಿತ್ತು. ವಿಪರೀತ ಕೆಸರು ತುಂಬಿದ ನೀರು ಬಂದು ಕಲ್ಲುಗುಂಡಿ ಹಾಗೂ ಚೌಕಿ ವ್ಯಾಪ್ತಿಯಲ್ಲಿ ವಿವಿಧ ಮನೆಗಳಿಗೆ ಹಾಗೂ ಅಂಗಡಿಗಳಿಗೆ ನುಗ್ಗಿತ್ತು. ಈ ಕಾರಣದಿಂದ ಸಚಿವರಿಗೆ ನದಿಯ ಹೂಳೆತ್ತುವ ಕುರಿತು ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ಕೊಂದಲಕಾಡು ನಾರಾಯಣ ಭಟ್, ನವೀನ್ಚಂದ್ರ ಕಂಪೆನಿ ತೋಟ, ನಾಗೇಶ್ ಪೇರಲ್, ಶಂಕರ್ ಪ್ರಸಾದ್ ರೈ, ಬಿ.ಆರ್.ಪದ್ಮಯ್ಯ, ರವಿಶಂಕರ್ ಭಟ್, ಶರತ್ ಕೀಲಾರು ಹಾಜರಿದ್ದರು.