ನ್ಯೂಸ್ ನಾಟೌಟ್ : ಭಾರತದಲ್ಲಿ ಡಿಜಿಲ್ ಕ್ರಾಂತಿ ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಕೇಂದ್ರ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಅಕ್ಟೋಬರ್ 12 ರಂದು 5ಜಿ ಸೇವೆಯನ್ನು ದೇಶದಲ್ಲಿ ಆರಂಭಿಸುತ್ತಿದೆ.
ಈ ಕುರಿತು ಟೆಲಿಕಾಂ ಸಚಿವ ಅಶ್ವಿನ್ ವೈಷ್ಣವ್ ಖಚಿತಪಡಿಸಿದೆ. ಟೆಲಿಕಾಂ ಸರ್ವೀಸ್ ಕಂಪನಿಗಳು ಈಗಾಗಲೇ 5ಜಿ ಸೇವೆಯನ್ನು ಗ್ರಾಹಕರಿಗೆ ನೀಡಲು ಸಜ್ಜಾಗಿದೆ. ಬಹುತೇಕ ಕೆಲಸ ಕಾರ್ಯಗಳು ಮುಕ್ತಾಯಗೊಂಡಿದೆ. ಅಕ್ಚೋಬರ್ 12ಕ್ಕೆ ದೇಶಾದ್ಯಂತ 5ಜಿ ಸೇವೆ ಆರಂಭಗೊಳ್ಳುತ್ತಿದೆ. ಆದರೆ ಎರಡರಿಂದ ಮೂರು ವರ್ಷಗಳಲ್ಲಿ 5ಜಿ ಸೇವೆ ದೇಶದ ಮೂಲೆ ಮೂಲೆಗೂ ತಲುಪಲಿದೆ ಎಂದು ಅಶ್ವಿನ್ ಹೇಳಿದ್ದಾರೆ. ಕೇಂದ್ರ ಟೆಲಿಕಾಂ ಸಚಿವಾಲಯ 5ಜಿ ತರಂಗಾತರ ಹಂಚಿಕೆಯಿಂದ 17,876 ಕೋಟಿ ರೂಪಾಯಿ ಹರಿದುಬಂದಿದೆ ಎಂದು ಅಶ್ವಿನ್ ವೈಷ್ಣವ್ ಹೇಳಿದ್ದಾರೆ.
5ಜಿ ಸೇವೆ ನೀಡಲು ಅಗತ್ಯವಾದ ಸ್ಪೆಕ್ಟ್ರಂ ಹರಾಜು ದಾಖಲೆಯ 1,50,173 ಕೋಟಿ ರು.ಮೊತ್ತಕ್ಕೆ ವಿವಿಧ ಕಂಪನಿಗಳು ಸ್ಪೆಕ್ಟ್ರಂ ಖರೀದಿ ಮಾಡಿವೆ. ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಅತ್ಯಧಿಕ ಪ್ರಮಾಣದ ತರಂಗಾಂತರ ಖರೀದಿ ಮೂಲಕ ಟಾಪ್ ಬಿಡ್ಡರ್ ಆಗಿ ಹೊರಹೊಮ್ಮಿದೆ. ಜಿಯೋ ನಂತರದಲ್ಲಿ ಏರ್ಟೆಲ್, ವೊಡಾಫೋನ್-ಐಡಿಯಾ ಕಂಪನಿಗಳು ಬಿಡ್ ಮಾಡಿವೆ.