ನ್ಯೂಸ್ ನಾಟೌಟ್ : ಕೊಡಗು ಸಂಪಾಜೆಯ ಗಣೇಶನನ್ನು ವಿಸರ್ಜನೆ ಮಾಡುವ ವಿಚಾರದಲ್ಲಿ ಇದ್ದ ಎಲ್ಲ ಗೊಂದಲಗಳಿಗೆ ತೆರೆ ಬಿದ್ದಿದೆ.
ಈ ಹಿಂದೆ ಕೊಡಗು ವ್ಯಾಪ್ತಿಯ ಪಂಚಲಿಂಗೇಶ್ವರ ಸನ್ನಿಧಿಯ ಸಮೀಪದ ಹೊಳೆಯಲ್ಲಿ ವಿರ್ಸಜನೆ ಮಾಡುವುದು ಅನ್ನುವ ತೀರ್ಮಾನಕ್ಕೆ ಬರಲಾಗಿತ್ತು. ಆದರೆ ಇದೀಗ ಅಂತಿಮ ಸಭೆಯಲ್ಲಿ ಹಿಂದಿನಿಂದ ನಡೆದುಕೊಂಡ ಬಂದಿರುವ ಸಂಪ್ರದಾಯದಂತೆ ಮುಂದುವರಿಯಲು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ದೇವತಾರಾಧನ ಸಮಿತಿ ಗೌರವ ಅಧ್ಯಕ್ಷರಾದ ಬಿ .ಆರ್ .ಶಿವರಾಮ್ ಅವರು ತಿಳಿಸಿದ್ದಾರೆ. ದೇವತಾರಾಧನ ಸಮಿತಿ ಅಧ್ಯಕ್ಷ ಲೋಹಿತ್ ಹೊದ್ದೆಟ್ಟಿ ಹಾಗೂ ಸಮಿತಿಯ ಪದಾಧಿಕಾರಿಗಳು, ಊರಿನ ಸಂಘ ಸಂಸ್ಥೆಯವರೊಂದಿಗೆ ನಡೆಸಿದ ಸಭೆಯ ಬಳಿಕ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ.
ದಿನಾಂಕ 31.08.2022ನೆ ಬುಧವಾರ ಅಪರಾಹ್ನ ೩ ಘಂಟೆ ಯಿಂದ ಶ್ರೀ ಗೌರಿ ಗಣೇಶ ಮೂರ್ತಿಗಳ ಶೋಭಾ ಯಾತ್ರೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ದಿಂದ ಹೊರಟು ಆಸ್ಪತ್ರೆ ರಸ್ತೆಗಾಗಿ ಮುಖ್ಯ ರಸ್ತೆಗೆ ಸೇರಲಿದೆ. ಅಲ್ಲಿಂದ ಚಡಾವು ವರೆಗೆ ಹೋಗಿ ಮರಳಿ ಸಂಪಾಜೆಯಿಂದ ಗಡಿಕಲ್ಲಿನ ವರೆಗೆ ಹೋಗಿ ದಿವಂಗತ ಎನ್ .ಎಸ್ ದೇವಿಪ್ರಸಾದ್ ಅವರ ಮನೆಗೆ ಹೋಗುವ ಸೇತುವೆಯ ಬಳಿ ಇರುವ ಸಂಗಮದಲ್ಲಿ ವಿಸರ್ಜನೆ ಮಾಡಲು ತೀರ್ಮಾನಿಸಲಾಗಿದೆ.