ನ್ಯೂಸ್ ನಾಟೌಟ್ : ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 24ನೇ ವರ್ಷದ ಭಟನಾ ತರಬೇತಿ ಕಮ್ಮಟವನ್ನು ದಿನಾಂಕ 16.09.2012 ರಿಂದ 23.09.2022 ರವರೆಗೆ ಸಂಯೋಜಿಸಲಾಗಿದೆ ಎಂದು ಭಜನಾ ಸಮಿತಿಯ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ತಿಳಿಸಿದ್ದಾರೆ.
ದಕ್ಷಿಣ ಕನ್ನಡ, ಉಡುಪಿ, ಕೊಡಗು, ಉತ್ತರಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಹಾಸನ, ಬೆಳಗಾವಿ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ ಜಿಲ್ಲೆಗಳ ಆಯ್ಕೆ ಭಟ್ಟರು ಮಂಡಳಿಗಳ 200 ಮಂದಿ ಪುರುಷ ಮತ್ತು 50 ಮಂದಿ ಮಹಿಳಾ ಅಭ್ಯರ್ಥಿಗಳಿಗೆ ತರಬೇತಿ ಪಡೆಯಲು ಅವಕಾಶವಿದೆ. ಇವರಿಗೆ ಭಜನಾ ಪರಿಣಿತರಿಂದ ವಿಶೇಷ ತರಬೇತಿ ನೀಡಲಾಗುವುದು. ಕಮ್ಮಟದಲ್ಲಿ ದಾಸ ಸಾಹಿತ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ಅದನ್ನು ಭಜನಾ ರೂಪದಲ್ಲಿ ಹೇಳಿಕೊಡಲಾಗುತ್ತದೆ. ಪ್ರಾರ್ಥನಾ ಹಾಡುಗಳು, ವಚನ ಸಾಹಿತ್ಯಗಳ ತರಬೇತಿ ನೀಡಲಾಗುತ್ತದೆ. ಮಹಿಳಾ ಶಿಬಿರಾರ್ಥಿಗಳಿಗೆ ಶೋಭಾನೆ ಹಾಡುಗಳನ್ನು ಹೇಳಿಕೊಡಲಾಗುತ್ತದೆ. ನೃತ್ಯ ಭಜನಾ ಪರಿಣಿತರಿಂದ ಹೇಳಿಕೊಡಲಾಗುತ್ತದೆ. ಅಲ್ಲದೆ ಯೋಗಾಭ್ಯಾಸ, ಧಾನ್ಯಗಳ ತರಬೇತಿ ವ್ಯವಸ್ಥೆಗೊಳಿಸಲಾಗುತ್ತದೆ. ಅಲ್ಲದೆ ವಿವಿಧ ವಿಷಯ ತಜ್ಞರಿಂದ ಒಂದು ಗಂಟೆಯ ಕಾಲ ಉಪನ್ಯಾಸ ಏರ್ಪಡಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಸುಬ್ರಹ್ಮಣ್ಯ ಪ್ರಸಾದ್ : 9448869340 , ಸುರೇಶ್ : 9945922849 ಅವರನ್ನು ಸಂಪರ್ಕಿಸಬಹುದಾಗಿದೆ.