ನ್ಯೂಸ್ ನಾಟೌಟ್: ಇತಿಹಾಸ ಪ್ರಸಿದ್ಧ ಕ್ಷೇತ್ರಗಳಲ್ಲಿ ಒಂದಾಗಿರುವ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಳದಿಂದ ನಡೆಸಲ್ಪಡುವ ಐದು ಯಕ್ಷಗಾನ ಮೇಳಗಳ ಪ್ರದರ್ಶನವನ್ನು ಮುಂದಿನ ತಿರುಗಾಟದಿಂದ ಕಾಲಮಿತಿಗೆ ಬದಲಾಯಿಸುವ ನಿರ್ಣಯವನ್ನು ಆಡಳಿತ ಮಂಡಳಿ ಕೈಗೊಂಡಿದೆ.
ಸದ್ಯ ರಾತ್ರಿ ಧ್ವನಿವರ್ಧಕವನ್ನು ಬಳಸಬಾರದು ಎನ್ನುವ ಸೂಚನೆಯನ್ನು ಎಲ್ಲ ದೇವಸ್ಥಾನಗಳಿಗೆ ಸರಕಾರ ನೀಡಿದೆ. ಈ ಹಿನ್ನೆಲೆಯಲ್ಲಿ ಯಕ್ಷಗಾನ ಪ್ರದರ್ಶನದ ಸಮಯವನ್ನು ಬದಲಿಸಬೇಕಾಗಿ ಬಂದಿದೆ. ಪ್ರತಿ ವರ್ಷ ಮೇಳಗಳು ಆರು ತಿಂಗಳು ತಿರುಗಾಟ ನಡೆಸುತ್ತದೆ. ವರ್ಷಕ್ಕೆ ಸುಮಾರು ೧ ಸಾವಿರಕ್ಕೂ ಅಧಿಕ ಪ್ರದರ್ಶನ ನಡೆಸುತ್ತಿದೆ. ರಾತ್ರಿ ಎಂದು ಗಂಟೆಯಿಂದ ಯಕ್ಷಗಾನ ಶುರುವಾದರೆ ಬೆಳಗ್ಗಿನ ತನಕ ಇರುತ್ತಿತ್ತು. ಮುಂದಿನ ದಿನಗಳಲ್ಲಿ ಎಲ್ಲವೂ ಬದಲಾದ ಸಮಯದಲ್ಲಿ ಬರುತ್ತಿರುವುದು ವಿಶೇಷವಾಗಿದೆ.