ನ್ಯೂಸ್ ನಾಟೌಟೌ: ‘ದೊಡ್ಡವರೆಲ್ಲ ಜಾಣರಲ್ಲ…ಚಿಕ್ಕವರೆಲ್ಲ ಕೋಣರಲ್ಲ’ ಎಂಬ ಗುರುಶಿಷ್ಯರು ಸಿನಿಮಾದ ಹಾಡನ್ನು ನೀವೆಲ್ಲರೂ ನೋಡಿರುತ್ತೀರಿ. ಅದರಿಂದ ನಮಗೆಲ್ಲ ತಿಳಿಯುವ ನೀತಿ ಪಾಠವೆನೆಂದರೆ ದೊಡ್ಡವರೂ ಸಣ್ಣವರಿಂದ ಕಲಿಯುವುದು ಸಾಕಷ್ಟು ವಿಚಾರಗಳು ಇರುತ್ತದೆ ಅನ್ನುವುದು.
ಪ್ರ್ರಧಾನಿ ನರೇಂದ್ರ ಮೋದಿಯವರು ತಮ್ಮ ಭಾಷಣಗಳಲ್ಲಿ ಸ್ವಚ್ಛ ಭಾರತದ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ. ಮತ್ತೊಂದು ಕಡೆ ವಿದ್ಯಾವಂತ ಅತಿ ಬುದ್ಧಿವಂತ ದೊಡ್ಡ ಜನರು ಐಷಾರಾಮಿ ಕಾರುಗಳಲ್ಲಿ ಬಂದು ಸಾರ್ವಜನಿಕ ಬಸ್ ಸ್ಟ್ಯಾಂಡ್ ಬದಿಗಳಲ್ಲಿ ನಿಲ್ಲಿಸಿ ತಿಂಡಿ ತಿನಿಸು ತಿಂದು ಕಟ್ಟಿಕೊಂಡು ಬಂದ ತಿಂಡಿ ಪೊಟ್ಟಣಗಳನ್ನು ಬಸ್ ಸ್ಟ್ಯಾಂಡ್ ನಲ್ಲೇ ಬಿಸಾಕಿ ಪರಿಸರಕ್ಕೆ ಹಾನಿ ಮಾಡುತ್ತಿರುತ್ತಾರೆ. ಆದರೆ ಈಗಷ್ಟೇ ಬೆಳೆಯುತ್ತಿರುವ ನಾಲ್ವರು ಮಕ್ಕಳು ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವವನ್ನು ಸಾರ್ವಜನಿಕ ಬಸ್ ಸ್ಟ್ಯಾಂಡ್ ಸ್ವಚ್ಛಗೊಳಿಸಿ ಸುದ್ದಿಯಾಗಿದ್ದಾರೆ. ಪುಟ್ಟ ಮಕ್ಕಳಲ್ಲಿನ ಇಂತಹ ದೊಡ್ಡ ಗುಣ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಕೊಡಗಿನ ಕೊಯನಾಡು ಅರಣ್ಯ ಇಲಾಖೆ ಪಕ್ಕದಲ್ಲಿರುವ ಬಸ್ ಸ್ಟ್ಯಾಂಡ್ನಲ್ಲಿ ಮಕ್ಕಳಾದ ಜಶ್ವಿನ್ ಕೇನಾಜೆ, ಧ್ವನ್ವಿನ್ ಕೇನಾಜೆ, ವಚನ್ ಕಲ್ಲಪಳ್ಳಿ ಹಾಗೂ ಹವಿನ್ ಕಲ್ಲಪಳ್ಳಿ ಶ್ರಮದಾನ ಮಾಡಿದ್ದಾರೆ. ಮಾತ್ರವಲ್ಲ ಅಂತಿಮವಾಗಿ ಬಣ್ಣ ಬಳಿದು ಬಸ್ ಸ್ಟ್ಯಾಂಡ್ ಅನ್ನು ಅಂದಗಾಣಿಸುವ ಪ್ರಯತ್ನ ನಡೆಸಿದ್ದಾರೆ. ಶಾಲಾ ಮಕ್ಕಳ ಪ್ರಯತ್ನಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.