ನ್ಯೂಸ್ ನಾಟೌಟ್: ಹುಟ್ಟು ಹಬ್ಬದ ದಿನದಂದೇ ಡೆತ್ ನೋಟ್ ಬರೆದಿಟ್ಟು ಉಪನ್ಯಾಸಕಿಯೊಬ್ಬರು ಆತ್ಮಹತ್ಯೆ ಶರಣಾಗಿರುವ ಘಟನೆ ಚಾಮರಾಜನಗರ ಜೆಎಸ್ಎಸ್ ಕಾಲೇಜಿನಲ್ಲಿ ನಡೆದಿದೆ.
ಚಂದನಾ (26) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾರೆ. ಚಾಮರಾಜನಗರ ಜೆಎಸ್ಎಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಚಂದನಾ ಸೇವೆ ಸಲ್ಲಿಸುತ್ತಿದ್ದರು.
ಹುಟ್ಟುಹಬ್ಬದ ದಿನವೇ ಜೆಎಸ್ಎಸ್ ಹಾಸ್ಟೆಲ್ನಲ್ಲಿ ನೇಣು ಬೀಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ಚಂದನಾ ಯಳಂದೂರು ತಾಲೂಕಿನ ಅಂಬಳ ಗ್ರಾಮದ ನಿವಾಸಿಯಾಗಿದ್ದಾರೆ. ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟಿದ್ದಾರೆ. ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.