ನ್ಯೂಸ್ ನಾಟೌಟ್: ಪ್ರವಾಹದಂತಹ ತುರ್ತು ಪರಿಸ್ಥಿತಿ ಸಮಯದಲ್ಲಿ ಕಿಟ್ ಕೊಟ್ಟು ಮಾಧ್ಯಮಗಳಲ್ಲಿ ಒಂದೆರಡು ಫೋಟೋ ಕ್ಲಿಕ್ಕಿಸಿಕೊಂಡು ಪ್ರಚಾರ ತೆಗೆದುಕೊಳ್ಳುವವರ ನಡುವಿನಲ್ಲಿ ಸಚಿವ ಎಸ್ ಅಂಗಾರ ವಿಭಿನ್ನವಾಗಿ ನಿಲ್ಲುತ್ತಾರೆ.
ಶಿಸ್ತು ಬದ್ಧವಾಗಿ ಕ್ರಮಬದ್ಧವಾಗಿ ಕಲ್ಲುಗುಂಡಿಯಿಂದ ಸಂತ್ರಸ್ತರ ಮನೆ ಮನೆಗೆ ತೆರಳಿ ಎಸ್ ಅಂಗಾರ ಪರಿಹಾರದ ಚೆಕ್ ವಿತರಿಸಿದ ನಡೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇವರಿಗೆ ಕೊಡಗಿನ ಶಾಸಕ ಬೋಪಯ್ಯ ಕೂಡ ಸಾಥ್ ನೀಡಿದ್ದು ವಿಶೇಷವಾಗಿತ್ತು. ಕಲ್ಲುಗುಂಡಿ, ಕೈಪಡ್ಕ, ಚೌಕಿ ಬಳಿ ಪ್ರವಾಹ ನೀರು ಮನೆಗಳಿಗೆ ನುಗ್ಗಿ ಅಪಾರ ಪ್ರಮಾಣದ ಹಾನಿಯಾಗಿತ್ತು. ಈ ಮನೆಗಳಿಗೆ ಭೇಟಿ ನೀಡಿ ಸಂತ್ರಸ್ತರಿಗೆ ತಲಾ ೧೦ ಸಾವಿರ ರೂ. ಚೆಕ್ ವಿತರಿಸಿದರು.
ಸುಳ್ಯ ತಾಲೂಕು ತಹಶೀಲ್ದಾರ್ ಅನಿತಾ ಲಕ್ಷ್ಮೀ, ಬಿಜೆಪಿ ಮುಖಂಡ ಹರೀಶ್ ಕಂಜಿಪಿಲಿ, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್, ಗ್ರಾಮ ಪಂಚಾಯತ್ ಸದಸ್ಯೆ ರಜನಿ ಶರತ್ ಕೀಲಾರು, ಕೇಶವ ಬಂಗ್ಲೆಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು.