ನ್ಯೂಸ್ ನಾಟೌಟ್ : ಸಂಪಾಜೆ, ಕಲ್ಲುಗುಂಡಿ ಭಾಗದಲ್ಲಿ ಆ.1ರಂದು ಮಧ್ಯರಾತ್ರಿ ಸಂಭವಿಸಿದ ಜಲಸ್ಪೋಟದಿಂದಾಗಿ ಹಾನಿಯಾದ ಪ್ರದೇಶಕ್ಕೆ ಸಚಿವ ಎಸ್. ಅಂಗಾರ ಆ.2ರಂದು ಸಂಜೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಗೂನಡ್ಕದ ಸಜ್ಜನ ಪ್ರತಿಷ್ಠಾನದಲ್ಲಿ ಆಶ್ರಯ ಪಡೆದಿರುವ ಕುಟುಂಬಗಳಿಗೆ ರೂ. ೧೦ ಸಾವಿರದಂತೆ ಪರಿಹಾರದ ಚೆಕ್ ವಿತರಿಸಿದರು. ಮಳೆ ಹಾನಿಯಿಂದಾಗಿ ಅಪಾರ ಪ್ರಮಾಣದಲ್ಲಿನಷ್ಟ ಸಂಭವಿಸಿದ ಕುಕ್ಕೆ ಸುಬ್ರಹ್ಮಣ್ಯ, ಹರಿಹರ , ಕೊಲ್ಲಮೊಗ್ರ ಹಾಗೂ ಕಲ್ಮಕಾರು ಭಾಗಗಳಿಗೆ ಭೇಟಿ ನೀಡಿದ್ದ ಸಚಿವರು ಸಂಜೆಯ ವೇಳೆ ಗೆ ಕಲ್ಲುಗುಂಡಿಗೆ ಆಗಮಿಸಿ ನೆರೆಹಾನಿ ಪ್ರದೇಶಗಳನ್ನು ವೀಕ್ಷಿಸಿದರು. ಅಲ್ಲದೇ ನೆರೆ ಹಾನಿಯಿಂದ ಮನೆಗಳಿಗೆ ಹಾನಿಯಾದ ಒಟ್ಟು ೪ ಕುಟುಂಬಗಳಿಗೆ ತಲಾ ಹತ್ತು ಸಾವಿರದಂತೆ ಪರಿಹಾರದ ಚೆಕ್ ಅನ್ನು ವಿತರಿಸಿದರು.