ನ್ಯೂಸ್ ನಾಟೌಟ್ : ಸುಳ್ಯ ಹಾಗೂ ಕಡಬ ತಾಲೂಕಿನಲ್ಲಿ ಮುಂದುವರಿದಿರುವ ಮಳೆಯ ಅಬ್ಬರದ ಕಾರಣದಿಂದ ಸುಳ್ಯ, ಕಡಬ ತಾಲೂಕಿನ ಶಾಲಾ-ಕಾಲೇಜಿಗೆ ರಜೆಯನ್ನು ವಿಸ್ತರಿಸಲಾಗಿದೆ.
ಜೋರು ಮಳೆಯಾಗಿದ್ದರಿಂದ ನೆರ ಪ್ರವಾಹ ಉಂಟಾಗಿದ್ದರಿಂದ ಮಂಗಳವಾರ ರಜೆ ನೀಡಲಾಗಿತ್ತು. ಇದೀಗ ಮತ್ತೆ ವರುಣ ಅಬ್ಬರಿಸಿರುವುದರಿಂದ ನಾಳೆ (ಆಗಸ್ಟ್ ೩ರಂದು) ಕೂಡ ರಜೆ ನೀಡಲಾಗುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರ ಡಾ ಕೆವಿ ರಾಜೇಂದ್ರ ಆದೇಶ ಹೊರಡಿಸಿದ್ದಾರೆ.