ನ್ಯೂಸ್ ನಾಟೌಟ್: ಬಿಜೆಪಿ ಯುವ ಮೋರ್ಚಾ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಬಂಧಿಸಿರುವ ಇಬ್ಬರು ಆರೋಪಿಗಳು ಯಾವುದೇ ಮಾಹಿತಿಯನ್ನು ನೀಡುತ್ತಿಲ್ಲ. ಉಳಿದ ಆರೋಪಿಗಳ ಬಗ್ಗೆ ನಮಗೆ ಏನೂ ಮಾಹಿತಿ ಗೊತ್ತಿಲ್ಲ ಎಂದು ಹೇಳುತ್ತಿದ್ದು ಇದು ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಶಫೀಕ್ ಬೆಳ್ಳಾರೆ, ಝಾಕೀರ್ ಸವಣೂರು ಪ್ರವೀಣ್ ಹತ್ಯೆಗೆ ಸಂಚು ರೂಪಿಸಿದವರು. ತಕ್ಕ ಪ್ಲಾನ್ ಮಾಡಿಕೊಂಡು ಕೇರಳದಿಂದ ಹಂತಕರನ್ನು ಬೆಳ್ಳಾರೆಗೆ ಕರೆಸಿಕೊಂಡು ರಾತ್ರಿ ಪ್ರವೀಣ್ ಅವರನ್ನು ಅವರ ಚಿಕನ್ ಅಂಗಡಿ ಸಮೀಪವೇ ಮಾರಕಾಸ್ತ್ರದಿಂದ ಕೊಚ್ಚಿ ಕೊಂದಿದ್ದರು. ಸದ್ಯ ಶಫೀಕ್ ಹಾಗೂ ಝಾಕೀರ್ ಅವರನ್ನು ಪೊಲೀಸರು ಗೌಪ್ಯ ಸ್ಥಳದಲ್ಲಿ ಇಟ್ಟು ತನಿಖೆ ನಡೆಸುತ್ತಿದ್ದಾರೆ. ಆದರೆ ಇಬ್ಬರು ತನಿಖೆಗೆ ಸರಿಯಾಗಿ ಸಹಕರಿಸುತ್ತಿಲ್ಲ. ಇದರಿಂದ ಮುಖ್ಯ ಆರೋಪಿಗಳನ್ನು ಬಂಧಿಸುವಲ್ಲಿ ವಿಳಂಬವಾಗುತ್ತಿದೆ ಎನ್ನಲಾಗಿದೆ.