ನ್ಯೂಸ್ ನಾಟೌಟ್: ಹೊಸದಾಗಿ ಚುನಾಯಿತರಾದ ಜಿಲ್ಲಾ ಪಂಚಾಯತ್ ಸದಸ್ಯನ ಮೇಲೆ ಗ್ಯಾಂಗ್ ಒಂದು ದೊಣ್ಣೆಗಳಿಂದ ಹೊಡೆದು, ಒದ್ದು, ಗುದ್ದಿರುವ ಘಟನೆ ಮಧ್ಯಪ್ರದೇಶದ ಸೆಹೋರ್ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.
ಜಿಲ್ಲಾ ಪಂಚಾಯತ್ ಚುನಾವಣೆಯ ಫಲಿತಾಂಶ ಬಂದ ನಂತರ ಈ ಘಟನೆ ನಡೆದಿದೆ. ರಾಕೇಶ್ ಲೋಧಿ ಅವರು ತಮ್ಮ ಕೆಲವು ಸಹಾಯಕರೊಂದಿಗೆ ನಿಂತಿದ್ದ ವೇಳೆ, ಐದು ಜನರಿದ್ದ ಮಹೇಶ್ ಲೋಧಿಯವರ ಗ್ಯಾಂಗ್ ದೊಣ್ಣೆಯನ್ನು ಹಿಡಿದುಕೊಂಡು ಬಂದು ಏಕಾಏಕಿ ಹಲ್ಲೆ ನಡೆಸಲು ಆರಂಭಿಸಿದ್ದಾರೆ.
A newly elected panch in was hit with sticks and kicked and punched by a group on men. The incident happened at a village in Sehore district @ndtv@ndtvindia pic.twitter.com/uX7BJFbFP5
— Anurag Dwary (@Anurag_Dwary) July 30, 2022
ನಡು ರಸ್ತೆಯಲ್ಲಿ ಪಂಚ ರಾಕೇಶ್ ಲೋಧಿ ಮೇಲೆ ದೊಣ್ಣೆಯಿಂದ ಹೊಡೆದಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.