ನ್ಯೂಸ್ ನಾಟೌಟ್ : ದುಷ್ಕರ್ಮಿಗಳಿಗೆ ಯಾವುದೇ ಅನುಕೂಲ ಮಾಡಲ್ಲ. ನಿರ್ಧಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಚಿವ ಅಶ್ವತ್ಥ್ ನಾರಾಯಣ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಈಗಾಗಲೇ ಸಿಎಂ ಹೇಳಿದ್ದಾರೆ. ದುಷ್ಕರ್ಮಿಗಳಿಗೆ ಯೋಗಿ ಸರಕಾರದ ಮಾದರಿಯಲ್ಲಿ ಶಿಕ್ಷೆ ಆಗುತ್ತದೆ. ಸಮಯ ಬಂದ್ರೆ ಎನ್ಕೌಂಟರ್ ಮಾಡೋಕೋ ಸಿದ್ಧವಾಗಿದೆ ನಮ್ಮ ಸರಕಾರ. ಗೊಂಡಾಗಳನ್ನು ಮಟ್ಟ ಹಾಕೋಕೆ ಏನು ಬೇಕಾದರೂ ಮಾಡ್ತೀವಿ ಎಂದು ಅಶ್ವತ್ಥ್ ನಾರಾಯಣ ತಿಳಿಸಿದ್ದಾರೆ. ಇದೇ ವೇಳೆ ಮಾತನಾಡಿದ ಸಚಿವ ಸುಧಾಕರ್, ಸಿಎಂ ನೋಡೋಕೆ ಮೃದು. ಆದರೆ ಗಟ್ಟಿ ನಿರ್ಧಾರ ತೆಗೆದುಕೊಳ್ಳುವುದರಲ್ಲಿ ನಿಸ್ಸೀಮರು. ಮುಂದಿನ ದಿನಗಳಲ್ಲಿ ಅವರಿಂದ ಎಂತಹ ಕ್ರಮ ಬರುತ್ತೆ ಅನ್ನುವುದನ್ನು ನೀವೆ ನೋಡ್ತಿರಿ ಎಂದು ತಿಳಿಸಿದರು.