ನ್ಯೂಸ್ ನಾಟೌಟ್: ಕಾನೂನು ಸುವ್ಯವಸ್ಥೆಯನ್ನು ನಿಮಗೆ ನಿಯಂತ್ರಣ ಮಾಡುವುದಕ್ಕೆ ಸಾಧ್ಯವಾಗದಿದ್ದರೆ ರಾಜೀನಾಮೆ ನೀಡಿ ಮನೆಗೆ ಹೋಗಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಬೊಮ್ಮಾಯಿಯವರೆ ನಿಮ್ಮ ಸರಕಾರಕ್ಕೆ ಏನೂ ಮಾಡಲಿಕ್ಕೆ ಸಾಧ್ಯವಾಗಿದ್ದರೆ ಮನೆಗೆ ಹೋಗಿ, ನಿಮಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲದಿದ್ದರೆ, ವಿರೋಧ ಪಕ್ಷದ ಮಾತುಗಳನ್ನು ಕೇಳಿಸಿಕೊಳ್ಳಲು ಆಗದಿದ್ದರೆ ರಿಸೈನ್ ಅಂಡ್ ಗೆಟೌಟ್ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಮಾತನಾಡಿದ ಅವರು, ತೇಜಸ್ವಿ ಸೂರ್ಯ ಕಾಂಗ್ರೆಸ್ ಸರಕಾರ ಇದ್ದಿದ್ದರೆ ಕಲ್ಲು ಹೊಡಿಬಹುದಿತ್ತು ಅಂತಾರೆ, ಒಬ್ಬ ಎಂಪಿ ಆಡುವ ಮಾತ ಇದು ಎಂದು ಟೀಕಿಸಿದರು. ಮಾತಿನ ಬರದಲ್ಲಿ ಇಂತಹವರಿಗೆ ಚಪ್ಪಲಿ ಅಂತ ಪ್ರಯೋಗ ಮಾಡಿದ್ದೇನೆ. ಅದಕ್ಕೆ ಕ್ಷಮೆ ಇರಲಿ. ಅದನ್ನು ಹಾಕಬೇಡಿ ಎಂದು ಮಾಧ್ಯಮದೊಂದಿಗೆ ಸಿದ್ಧರಾಮಯ್ಯ ಮನವಿ ಮಾಡಿದರು.