ನ್ಯೂಸ್ ನಾಟೌಟ್ : ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದ ಹುಡುಗ ಫಾಜಿಲ್ ಈಗ ಹೆಣವಾಗಿದ್ದಾನೆ. ದುಷ್ಕರ್ಮಿಗಳ ತಲ್ವಾರ್ ದಾಳಿಗೆ ಬಲಿಯಾಗಿದ್ದಾನೆ. ಒಂದು ಕಡೆ ಹಿಂದೂ ಮುಖಂಡ ಪ್ರವೀಣ್ ಹತ್ಯೆ, ಇನ್ನೊಂದು ಕಡೆ ಫಾಜಿಲ್, ಮಸೂಸ್ ಹತ್ಯೆ, ಕಳೆದ ೧೦ ದಿನದಲ್ಲಿ ಮೂರು ಹೆಣಗಳು ಉರುಳಿವೆ.
ಇದರಿಂದ ದಕ್ಷಿಣ ಕನ್ನಡ ಜಿಲ್ಲೆ ಅಕ್ಷರಶಃ ಬೂದಿ ಮುಚ್ಚಿದ ಕೆಂಡದಂತಾಗಿದೆ. ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳುವಂತೆ ಪೊಲೀಸರು ಜನತೆಯಲ್ಲಿ ಮನವಿ ಮಾಡುತ್ತಿದ್ದಾರೆ. ದುಷ್ಕರ್ಮಿಗಳ ದ್ವೇಷಕ್ಕೆ ಎಳೆಯ ಪ್ರಾಯದ ಹುಡುಗರು ಬಲಿಯಾಗುತ್ತಿರುವುದು ವಿಪರ್ಯಾಸವೇ ಸರಿ.
ಗೆಳೆಯರ ಪ್ರೀತಿಯ ಫಾಜಿಲ್ ಇನ್ನು ಕೇವಲ ನೆನಪು ಮಾತ್ರ, ಫಾಝಿಲ್ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ. ಸಾವಿರಾರು ಮಂದಿ ಫಾಝಿಲ್ ಅಂತಿಮ ದರ್ಶನ ಪಡೆದರು. ಮಂಗಳಪೇಟೆ ಮುಕ್ಕುದ್ದೀನ್ ಜುಮಾ ಮಸೀದಿಯಲ್ಲಿ ಆತನ ಅಂತ್ಯ ಸಂಸ್ಕಾರ ನಡೆಸಲಾಗಿದೆ. ಮಗನನ್ನು ಕಳಕೊಂಡ ಕುಟುಂಬಸ್ಥರ ರೋದನ ಮುಗಿಲು ಮುಟ್ಟಿದೆ. ಕೇವಲ 24 ವರ್ಷದ ಹಾಜಿಲ್ ಮರಣ ಕುಟುಂಬಕ್ಕೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.