ನ್ಯೂಸ್ ನಾಟೌಟ್: ‘ಪ್ರವೀಣ್ ಕುಟುಂಬದ ಒಬ್ಬನೇ ಮಗ. ಅವನನ್ನು ಕಳೆದುಕೊಂಡ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಅವರ ಮನೆಯೂ ಬೀಳುವ ಸ್ಥಿತಿಯಲ್ಲಿದೆ. ಕುಟುಂಬಕ್ಕೆ ಗಟ್ಟಿಮುಟ್ಟಾದ ಮನೆ ಕಟ್ಟಿಕೊಡಲು ಪಕ್ಷದ ಪ್ರಮುಖರು ಹಾಗೂ ಈ ಭಾಗದ ಶಾಸಕರು ಸೇರಿ ತೀರ್ಮಾನಿಸಿದ್ದೇವೆ’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ಹತ್ಯೆಗೊಳಗಾದ ಪ್ರವೀಣ್ ನೆಟ್ಟಾರು ಅವರ ಮನೆಗೆ ಗುರುವಾರ ಭೇಟಿ ನೀಡಿದ ಅವರು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಸುದ್ಧಿಗಾರರ ಜೊತೆ ನಾತನಾಡಿದ ಅವರು, ‘ಈ ಘಟನೆ ದುರದೃಷ್ಟಕರ. ಪ್ರವೀಣ್ ಅವರ ಕುಟುಂಬಕ್ಕೊದಗಿದ ಸ್ಥಿತಿ ಕಂಡು ಏನು ಹೇಳಬೇಕೆಂದೇ ತೋಚುತ್ತಿಲ್ಲ. ಮಗನ ಸ್ಥಾನ ತುಂಬಲು ಸಾಧ್ಯವಿಲ್ಲ. ಕುಟುಂಬಕ್ಕೆ ಸ್ಥೈರ್ಯ ತುಂಬುವ ಪ್ರಯತ್ನ ಮಾಡಿದ್ದೇವೆ ಅಷ್ಟೇ ಎಂದರು.