ನ್ಯೂಸ್ ನಾಟೌಟ್: ಕಳೆದ ಕೆಲವು ದಿನಗಳಿಂದ ವಾಹನ ಸಂಚಾರ ನಿಷೇಧಿಸಲ್ಪಟ್ಟಿದ್ದ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 275ರ ಮಡಿಕೇರಿ-ತಾಳತ್ ಮನೆ ಜಂಕ್ಷನ್ ವರೆಗಿನ ಮಾರ್ಗವನ್ನು ಇದೀಗ ಲಘುವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಈ ಸಂಬಂಧ ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಡಾ. ಬಿ.ಸಿ.ಸತೀಶ ಆದೇಶ ಹೊರಡಿಸಿದ್ದಾರೆ.
ಅದರಂತೆ ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಿಂದ ಜಿಲ್ಲಾಡಳಿತ ಭವನದ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ7+1 ಸೀಟರ್ ವರೆಗಿನ ವಾಹನಗಳು ದ್ವಿಮುಖವಾಗಿ ಸಂಚರಿಸಬಹುದಾಗಿದೆ. ಉಳಿದಂತೆ 7+1 ಸೀ ಟರ್’ಗಿಂತ ಹೆಚ್ಚಿನ ಸಾಮರ್ಥ್ಯದ 4 ಚಕ್ರ ವಾಹನಗಳು ಮಂಗಳೂರು ಕಡೆಗೆ ಏಕಮುಖವಾಗಿ ಸಂಚರಿಸಬಹುದದಾಗಿದ್ದು, 7+1 ಸೀಟರ್’ಗಿಂತ ಹೆಚ್ಚಿನ ಸಾಮರ್ಥ್ಯದ 4 ಚಕ್ರ ವಾಹನಗಳು ಮಂಗಳೂರಿನಿಂದ ಮಡಿಕೇರಿ ಕಡೆಗೆ ಸಂಪಾಜೆ – ತಾಳತ್ತಮನೆ- ಮೇಕೇರಿ ಮಾರ್ಗವಾಗಿ ಏಕಮುಖವಾಗಿ ಸಂಚರಿಸಬಹುದೆಂದು ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. 16.2 ಟನ್ ಒಳಪಟ್ಟ ಸರಕು ಸಾಗಣೆ ವಾಹನಗಳು, ಖಾಸಗಿ ಮತ್ತು ಕೆ.ಎಸ್ಆರ್ಟಿಸಿ ಬಸ್ ಗಳು, ಅನಿಲ, ರಸಗೊ ಬ್ಬರ ಹಾಗೂ ಇಂಧನ ಸಾಗಣೆ ವಾಹನಗಳು ಎರಡೂ ರಸ್ತೆಗಳಲ್ಲಿ ಏಕಮುಖವಾಗಿ ಸಂಚರಿಸಬಹುದೆಂದು ಹೇಳಿದ್ದಾರೆ.