ನ್ಯೂಸ್ ನಾಟೌಟ್: ಕಬಡ್ಡಿ ಆಟದ ವೇಳೆ ಕಬಡ್ಡಿ ಪಟುವೊಬ್ಬ ಹೃದಯ ಸ್ತಂಭನಕ್ಕೆ ಒಳಗಾಗಿ ಮೃತಪಟ್ಟಿರುವ ಘಟನೆ ತಮಿಳುನಾಡಿನ ಸೇಲಂ ಬಳಿಯ ಮನಾದಿಕುಪ್ಪಂ ಪಟ್ಟಣದಲ್ಲಿ ನಡೆದಿದೆ.
ಮೃತನನ್ನು 22 ವರ್ಷದ ವಿಮಲ್ರಾಜ್ ಎಂದು ಗುರುತಿಸಲಾಗಿದೆ. ಸೇಲಂನ ‘ಸಾಮಿ ಕಬಡ್ಡಿ ಅಕಾಡೆಮಿ’ ಆಯೋಜಿಸಿದ್ದ ಕಬಡ್ಡಿ ಟೂರ್ನಿಯಲ್ಲಿ ಅವರು ಭಾಗವಹಿಸಿದ್ದರು. ರೈಡಿಂಗ್ಗೆ ಹೋಗಿದ್ದ ವಿಮಲರಾಜ್ ಮೇಲೆ ಎದುರಾಳಿ ತಂಡದವರು ಆಕ್ರಮಣ ಮಾಡಿದ್ದಾರೆ. ಈ ವೇಳೆ ಎದುರಾಳಿ ತಂಡದ ಆಟಗಾರ ವಿಮಲರಾಜ್ ಮೇಲೆ ಓಡಿ ಬಂದು ಮೊಣಕಾಲು ಇಟ್ಟಿದ್ದಾನೆ. ಇದರಿಂದ ಸ್ಥಳದಲ್ಲೆ ಕುಸಿದ ವಿಮಲರಾಜ್, ಹೃದಯ ಸ್ತಂಭನದಿಂದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಈ ಕುರಿತು ವಿಡಿಯೊ ವೈರಲ್ ಆಗಿದೆ. ಸೇಲಂ ಪೊಲೀಸರು ‘ಸಾಮಿ ಕಬಡ್ಡಿ ಅಕಾಡೆಮಿ’ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.ಮೃತ ವಿದ್ಯಾರ್ಥಿ ಸೇಲಂನ ಸರ್ಕಾರಿ ಕಾಲೇಜೊಂದರಲ್ಲಿ ಬಿ.ಎಸ್ಸಿ ಎರಡನೇ ವರ್ಷದಲ್ಲಿ ಓದುತ್ತಿದ್ದ ಎನ್ನಲಾಗುತ್ತಿದೆ.